ಸ್ವ ಹಿತಾಸಕ್ತಿ ಸಂಘರ್ಷದಲ್ಲಿ ವಿರಾಟ್ ಕೊಹ್ಲಿ: ಬಿಸಿಸಿಐಗೆ ದೂರು

ಸೋಮವಾರ, 6 ಜುಲೈ 2020 (09:15 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಲೋಧಾ ಸಮಿತಿ ವರದಿಯನ್ವಯ ಸ್ವ ಹಿತಾಸಕ್ತಿ ಹುದ್ದೆ ಸಂಘರ್ಷಕ್ಕೊಳಗಾಗಿದ್ದು, ಅವರ ವಿರುದ್ಧ ಬಿಸಿಸಿಐಗೆ ದೂರು ನೀಡಲಾಗಿದೆ.


ಸುಪ್ರೀಂಕೋರ್ಟ್ ನಿಯಮಿತ ಲೋಧಾ ಸಮಿತಿ ವರದಿಯ ಅನ್ವಯ ಬಿಸಿಸಿಐನಲ್ಲಿ ಹುದ್ದೆ ಹೊಂದಿರುವವರು ಬೇರೆ ಉದ್ಯಮಗಳಲ್ಲಿ ಲಾಭದಾಯಕ ಹುದ್ದೆಯಲ್ಲಿರುವಂತಿಲ್ಲ. ಆದರೆ ಕೊಹ್ಲಿ ಟೀಂ ಇಂಡಿಯಾ ನಾಯಕನಾಗಿರುವಾಗಲೇ ಒಂದಕ್ಕಿಂತ ಹೆಚ್ಚು ಬೇರೆ ಲಾಭದಾಯಕ ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಮಧ್ಯಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸದಸ್ಯ ಸಂಜೀವ್ ಗುಪ್ತಾ ಬಿಸಿಸಿಐಗೆ ದೂರು ನೀಡಿದ್ದಾರೆ.

ಈ ಮೊದಲು ಸಚಿನ್, ವಿವಿಎಸ್ ಲಕ್ಷ್ಮಣ್, ಸೌರವ್ ಗಂಗೂಲಿ ವಿರುದ್ಧವೂ ಸಂಜೀವ್ ಗುಪ್ತಾ ಇದೇ ಆರೋಪ ಮಾಡಿದ್ದರು. ನಿಯಮದ ಪ್ರಕಾರ ಇದೀಗ ಕೊಹ್ಲಿಯೂ ವಿಚಾರಣೆಗೊಳಪಡಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ