ಯುವರಾಜ್ ಸಿಂಗ್, ಸುರೇಶ್ ರೈನಾ ತಂಡದಿಂದ ಕೈ ಬಿಟ್ಟಿದ್ದರ ರಹಸ್ಯ ಬಯಲು
ಗುರುವಾರ, 17 ಆಗಸ್ಟ್ 2017 (09:18 IST)
ಮುಂಬೈ: ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಹಿರಿಯ ಆಟಗಾರರಾದ ಯುವರಾಜ್ ಸಿಂಗ್, ಸುರೇಶ್ ರೈನಾರನ್ನು ಕೈಬಿಟ್ಟಿದ್ದೇಕೆ ಎಂದು ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಇದರ ರಹಸ್ಯ ಬಯಲಾಗಿದೆ.
ಯುವರಾಜ್, ರೈನಾಗೆ ಕೊಕ್ ನೀಡಲು ಕಾರಣ ಫಿಟ್ ನೆಸ್ ಕಾರಣ ಎನ್ನಲಾಗಿದೆ. ಇವರಿಬ್ಬರಿಗೂ ಇದೇ ಕಾರಣಕ್ಕೆ ವಿಶ್ರಾಂತಿ ನೀಡಲಾಗಿದೆ ಎಂದು ಬಿಸಿಸಿಐ ಹೇಳಿದೆ.
ಭಾರತೀಯ ಕ್ರಿಕೆಟ್ ತಂಡದ ಆಟಗಾರರಿಗೆ ಯೋ ಯೋ ಎಂಬ ಫಿಟ್ ನೆಸ್ ಪರೀಕ್ಷೆ ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಯುವರಾಜ್ ಮತ್ತು ರೈನಾ ತೀರಾ ಕಳಪೆ ಪ್ರದರ್ಶನ ನೀಡಿದ್ದರು. ಈ ಫಿಟ್ ನೆಸ್ ಪರೀಕ್ಷೆಯಲ್ಲಿ ಪಾಸಾಗಬೇಕಾದರೆ 21 ಅಂಕ ಗಳಿಸಬೇಕು.
ಯುವಿ, ರೈನಾ 16 ಅಂಕ ಗಳಿಸಲು ಶಕ್ತರಾಗಿದ್ದರಷ್ಟೇ. ಅಶ್ವಿನ್, ಜಡೇಜಾ, ಮನೀಶ್ ಪಾಂಡೆ ಹಾಗೂ ನಾಯಕ ಕೊಹ್ಲಿ 21 ಅಂಕ ಗಳಿಸಿದ್ದರು. ಉಳಿದ ಆಟಗಾರರು 19.5 ಅಂಕ ಗಳಿಸಿದ್ದರು.