ರೋಹಿತ್ ಶರ್ಮಾ ಪ್ರೇಮಕ್ಕೆ ಬ್ರೇಕ್ ಹಾಕುತ್ತಾ ಮಳೆ?

ಗುರುವಾರ, 21 ಸೆಪ್ಟಂಬರ್ 2017 (11:02 IST)
ಕೋಲ್ಕೊತ್ತಾ: ಒಬ್ಬೊಬ್ಬ ಆಟಗಾರರಿಗೆ ಒಂದೊಂದು ಪ್ರಿಯವಾದ ಮೈದಾನವಿರುತ್ತದೆ. ಭಾರತದ ತಂಡದ ಆರಂಭಿಕ ರೋಹಿತ್ ಶರ್ಮಾ ವಿಚಾರದಲ್ಲಿ ಕೋಲ್ಕೊತ್ತಾದ ಈಡನ್ ಗಾರ್ಡನ್ ಮೈದಾನ ಮೆಚ್ಚಿನ ಮೈದಾನವೆಂದೇ ಹೇಳಬೇಕು. ಇಲ್ಲಿ ಅವರು ಗಳಿಸಿದ ರನ್ ಗಳೇ ಅವರ ಈ ಪ್ರೇಮಕ್ಕೆ ಸಾಕ್ಷಿ.


ಈಡನ್ ಗಾರ್ಡನ್ ನಲ್ಲಿ ರೋಹಿತ್ ಇನಿಂಗ್ಸ್ ನ್ನು ಯಾರು ತಾನೇ ಮರೆಯಲು ಸಾಧ್ಯ? ಏಕದಿನ ಪಂದ್ಯದ ಇತಿಹಾಸದಲ್ಲೇ ಅತ್ಯಧಿಕ ರನ್ ಪೇರಿಸಿದ್ದು ಇದೇ ಮೈದಾನದಲ್ಲಿ. 2014 ರಲ್ಲಿ ಶ್ರೀಲಂಕಾ ವಿರುದ್ಧ ಇದೇ ಮೈದಾನದಲ್ಲಿ ರೋಹಿತ್ 173 ಬಾಲ್ ಗಳಲ್ಲಿ 264 ರನ್ ಸಿಡಿಸಿದ್ದರು.

ಇದರ ಹೊರತಾಗಿ ಈ ಮೈದಾನದಲ್ಲಿ ರೋಹಿತ್ 99.87 ಸ್ಟ್ರೈಕ್ ರೇಟ್ ನಲ್ಲಿ ಒಟ್ಟು 794 ರನ್ ಪೇರಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ 24 ಇನಿಂಗ್ಸ್ ಗಳಿಂದ 1325 ರನ್ ಗಳಿಸಿದ್ದಾರೆ. ಇದೀಗ ಕೋಲ್ಕೊತ್ತಾ ಅಭಿಮಾನಿಗಳಿಗೆ ಮತ್ತೆ ರೋಹಿತ್ ರ ಈ ಪಿಚ್ ಪ್ರೇಮ ನೋಡುವಾಸೆ. ಆದರೆ ಪಂದ್ಯಕ್ಕೆ ಮಳೆಭೀತಿಯಿದ್ದು, ವರುಣ ಅನುವು ಮಾಡಿಕೊಟ್ಟರೆ ಮಾತ್ರ ಅಭಿಮಾನಿಗಳ ಆಸೆ ಈಡೇರಲು ಸಾಧ್ಯ.

ಇದನ್ನೂ ಓದಿ…  ಪ್ರಧಾನಿ ಮೋದಿ ಸರ್ಕಾರ ಭಾರತದ ಮಾನ ಹರಾಜು ಹಾಕುತ್ತಿದೆ: ರಾಹುಲ್ ಗಾಂಧಿ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ