ಐಸಿಸಿ ಪ್ಲೇಯರ್ ಆಫ್ ದಿ ಡಿಕೇಡ್ ಪ್ರಶಸ್ತಿಗೆ ಕೊಹ್ಲಿ, ಅಶ್ವಿನ್ ಹೆಸರು ನಾಮಿನೇಟ್

ಬುಧವಾರ, 25 ನವೆಂಬರ್ 2020 (08:57 IST)
ದುಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ರವಿಚಂದ್ರನ್ ಅಶ್ವಿನ್ ಐಸಿಸಿಯ ಡಿಕೇಡ್ ಆಫ್ ದಿ ಇಯರ್ ಪ್ರಶಸ್ತಿಗೆ ನಾಮಿನೇಟ್ ಆಗಿದ್ದಾರೆ.


ಅದರಲ್ಲೂ ಕೊಹ್ಲಿ ಒಟ್ಟು ಐದು ವಿಭಾಗಗಳಿಗೆ ನಾಮಿನೇಟ್ ಆಗಿದ್ದಾರೆ. ಪ್ಲೇಯರ್ ಆಫ್ ದಿ ಡಿಕೇಡ್ ಅಲ್ಲದೆ ಒಡಿಐ ಪ್ಲೇಯರ್ ಆಫ್ ದಿ ಡಿಕೇಡ್, ಟಿ20 ಪ್ಲೇಯರ್ ಆಫ್ ದಿ ಡಿಕೇಡ್, ಟೆಸ್ಟ್ ಪ್ಲೇಯರ್ ಆಫ್ ದಿ ಡಿಕೇಡ್ ಮತ್ತು ಸ್ಪಿರಿಟ್ ಆಫ್ ಕ್ರಿಕೆಟ್ ಅವಾರ್ಡ್ ಗೆ ಕೊಹ್ಲಿ ಹೆಸರು ನಾಮನಿರ್ದೇಶನಗೊಂಡಿದೆ.

ವಿರಾಟ್ ಕೊಹ್ಲಿಯಲ್ಲದೆ, ರೋಹಿತ್ ಶರ್ಮಾ ಏಕದಿನ ಮತ್ತು ಟಿ20 ಪ್ಲೇಯರ್ ಮತ್ತು ಧೋನಿ ಏಕದಿನ ಆಟಗಾರ ಮತ್ತು ಸ್ಪಿರಿಟ್ ಆಫ್ ಕ್ರಿಕೆಟ್ ಪ್ರಶಸ್ತಿಗೆ ನಾಮಿನೇಟ್ ಆಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ