ಭಾರತದ ಮಾಜಿ ನಾಯಕ ಕಪಿಲ್ ದೇವ್‌ಗೆ ವಿರಾಟ್ ಕೊಹ್ಲಿಯನ್ನು ಕಂಡರೆ ಪ್ರೀತಿ ಹೆಚ್ಚುತ್ತಿದೆ. ಭಾರತದ ಟೆಸ್ಟ್ ನಾಯಕನಿಗೆ ಬ್ರಿಯಾನ್ ಲಾರಾ ಅವರ ಸುದೀರ್ಘ ಕಾಲದ ದಾಖಲೆ 400 ರನ್ ಮುರಿಯುವಂತೆ ಹುರಿದುಂಬಿಸಿದ್ದ ಕಪಿಲ್ ಈಗ ಕೊಹ್ಲಿಯನ್ನು ಯುದ್ಧ ಕಲೆ ನಿಪುಣ ಮತ್ತು ನಟ ಬ್ರೂಸ್‌ಲೀಗೆ ಹೋಲಿಸಿದ್ದಾರೆ. ನಾಲ್ಕು ವರ್ಷಗಳ ಹಿಂದೆ ತಾವು ಹೇಗೆ ಫಿಟ್ನೆಸ್ ಕಡೆ ಗಮನವಹಿಸಿದೆ ಎಂದು ಕೊಹ್ಲಿ ಇತ್ತೀಚೆಗೆ ಬಹಿರಂಗ ಮಾಡಿದ್ದರು.
ಕೊಹ್ಲಿಯ ಇತ್ತೀಚಿನ ಸತತ ಪ್ರಯತ್ನವು ಕ್ರಿಕೆಟ್ ತಜ್ಞರನ್ನು ಅಚ್ಚರಿಗೊಳಿಸಿದೆ. ಜಟಿಲ ಬೌಲಿಂಗ್ ದಾಳಿ ವಿರುದ್ಧ ವಿವಿಧ ಪರಿಸ್ಥಿತಿಯಲ್ಲಿ ಕೊಹ್ಲಿ ಏಳು ಶತಕಗಳನ್ನು ಸಿಡಿಸಿದ್ದಾರೆ. ಯಶಸ್ಸಿಗೆ ಕೊಹ್ಲಿಯ ಮಂತ್ರ ಸರಳವಾಗಿದ್ದು, ತಿನ್ನು, ನಿದ್ರೆಮಾಡು, ಅಭ್ಯಾಸಮಾಡು, ಪುನರಾವರ್ತಿಸು! ಎನ್ನುವುದು ಕೊಹ್ಲಿಯ ಮಂತ್ರವಾಗಿದೆ.