ಮದುವೆ ವಿಚಾರಕ್ಕೆ ಟ್ರೋಲ್ ಆದ ಕ್ರಿಕೆಟಿಗ ಯಜುವೇಂದ್ರ ಚಾಹಲ್

ಗುರುವಾರ, 2 ಜನವರಿ 2020 (10:17 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗರ ಪೈಕಿ ಸದ್ಯಕ್ಕೆ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಗಳಲ್ಲಿ ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್ ಕೂಡಾ ಇದ್ದಾರೆ. ಇದೀಗ ಮದುವೆ ವಿಚಾರಕ್ಕೆ ಚಾಹಲ್ ಅಭಿಮಾನಿಗಳಿಂದ ಟ್ರೋಲ್ ಗೊಳಗಾಗಿದ್ದಾರೆ.


ನಿಶ್ಚಿತಾರ್ಥ ಮಾಡಿಕೊಂಡ ಹಾರ್ದಿಕ್ ಪಾಂಡ್ಯಗೆ ಸಾಮಾಜಿಕ ಜಾಲತಾಣದಲ್ಲಿ ಕುಲದೀಪ್ ಯಾದವ್ ‘ನಿನಗೆ ಲಕ್ಷ ಲಕ್ಷ ಅಭಿಂದನೆಗಳು’ ಎಂದು ಕಾಮೆಂಟ್ ಬರೆದಿದ್ದರು. ಕುಲದೀಪ್ ಯಾದವ್ ರನ್ನು ತಮಾಷೆ ಮಾಡಿದ ಯಜುವೇಂದ್ರ ಚಾಹಲ್ ‘ನಿನ್ನದು ಯಾವಾಗ?’ ಎಂದು ಕಾಲೆಳೆದಿದ್ದರು.

ಆದರೆ ಈ ಕಾಮೆಂಟ್ ಚಾಹಲ್ ಗೇ ತಿರುಗುಬಾಣವಾಗಿದೆ. ಚಾಹಲ್ ಕಾಮೆಂಟ್ ನೋಡಿ ಅಭಿಮಾನಿಗಳು ಇನ್ನಿಲ್ಲದಂತೆ ಟ್ರೋಲ್ ಮಾಡಿದ್ದಾರೆ. ಅವರನ್ನು ಕೇಳುವ ಚಾಹಲ್ ನಿಮ್ಮ ಸರದಿ ಯಾವಾಗ ಎಂದು ಮೊದಲು ಹೇಳಿ ಎಂದು ಟ್ರೋಲ್ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ