ಈ ಚಿತ್ರದಲ್ಲಿರುವ ವಿರಾಟ್ ಕೊಹ್ಲಿಯನ್ನು ನೀವು ಗುರುತಿಸಬೇಕಂತೆ!

ಶುಕ್ರವಾರ, 13 ಜನವರಿ 2017 (14:12 IST)
ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇದೀಗ ಸ್ವಲ್ಪ ರಜಾ ಮಜಾ ಪಡೆಯುತ್ತಿದ್ದಾರೆ. ಹಾಗಾಗಿ ಎಲ್ಲೋ ಮನೆಯ ಮೂಲೆಯಲ್ಲಿದ್ದ ಫೋಟೋಗಳನ್ನೆಲ್ಲಾ ಅಭಿಮಾನಿಗಳಿಗೆ ತೋರಿಸುತ್ತಿದ್ದಾರೆ.


ಹಾಗೇ ಒಂದು ಹಳೇ ಫೋಟೋವನ್ನು ಟ್ವಿಟರ್ ನಲ್ಲಿ ಪ್ರಕಟಿಸಿದ್ದಾರೆ. ಹಳೆಯ ದಿನಗಳು ಯಾವತ್ತೂ ಖುಷಿಕೊಡುತ್ತವೆ. ಈ ಫೋಟೋದಲ್ಲಿ ನಾನೆಲ್ಲಿದ್ದೇನೆ ಎಂದು ಹೇಳಿ ನೋಡೋಣ ಎಂದು ಅಭಿಮಾನಿಗಳಿಗೆ ಸವಾಲೆಸೆದಿದ್ದಾರೆ. ಅಸಲಿಗೆ ಆ ಫೋಟೋದಲ್ಲಿ ಅವರನ್ನು ಪತ್ತೆ ಮಾಡುವುದು ಕಷ್ಟವೇನೂ ಆಗುತ್ತಿಲ್ಲ ಬಿಡಿ. ಯಾಕೆಂದರೆ ಈಗಲೂ ಅವರೇ ಹಾಗೆಯೇ ಇದ್ದಾರೆ. ಸ್ವಲ್ಪ ಗಡ್ಡ ಮೀಸೆ ಬಂದಿದೆ ಎನ್ನುವುದು ಬಿಟ್ಟರೆ ಥೇಟ್ ಹಾಗೇ ಇದ್ದಾರೆ.

ತಮ್ಮದೇ ವಯಸ್ಸಿನ ಯುವ ಕ್ರಿಕೆಟ್ ಹುಡುಗರ ಮಧ್ಯೆ ಕುಳಿತುಕೊಂಡು ಕೋಚ್ ಹೇಳುವ ಪಾಠವನ್ನು ಭಾರೀ ಆಸಕ್ತಿಯಿಂದ ಕೇಳುವ ದೃಶ್ಯ ಇಲ್ಲಿದೆ. ಇದರಲ್ಲಿ ಕೊಹ್ಲಿ ಯಾರು ಎಂದು ಫೋಟೋ ನೋಡಿ ನೀವೇ ಹೇಳಿ ಮತ್ತೆ?

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ