ಲಂಡನ್: ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ಪಾಕಿಸ್ತಾನ ವಿರುದ್ಧ ಹೀನಾಯವಾಗಿ ಸೋತರೂ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಅತೀ ಹೆಚ್ಚು ಐಸಿಸಿ ಟೂರ್ನಿಯ ಫೈನಲ್ ಪಂದ್ಯಗಳಲ್ಲಿ ಆಡಿದ ದಾಖಲೆ ಇದೀಗ ಯುವಿ ಪಾಲಾಗಿದೆ. ನಿನ್ನೆ ಮುಕ್ತಾಯಗೊಂಡ ಐಸಿಸಿ ಟೂರ್ನಿಯಲ್ಲಿ ಫೈನಲ್ ಪಂದ್ಯದಲ್ಲಿ ಪಾಲ್ಗೊಳ್ಳುವ ಮೂಲಕ ಯುವಿ ಒಟ್ಟು ಏಳು ಐಸಿಸಿ ಫೈನಲ್ ಪಂದ್ಯಗಳನ್ನಾಡಿದ ಏಕೈಕ ಬ್ಯಾಟ್ಸ್ ಮನ್ ಎಂಬ ದಾಖಲೆ ಮಾಡಿದರು.
ಆದರೂ ಈ ಪಂದ್ಯದಲ್ಲಿ ಯುವಿಗೆ ಹೆಚ್ಚಿನದೇನೂ ಕಮಾಲ್ ಮಾಡಲು ಸಾಧ್ಯವಾಗಿಲ್ಲ ಬಿಡಿ. ವಿಶೇಷವೆಂದರೆ 17 ವರ್ಷಗಳ ಮೊದಲು ಯುವಿ ಐಸಿಸಿ ಟೂರ್ನಿಗೆ ಪದಾರ್ಪಣೆ ಮಾಡಿದ್ದಾಗ ನ್ಯೂಜಿಲೆಂಡ್ ತಂಡವನ್ನು ಎದುರಿಸಿದ್ದರು. ಆಗಲೂ ಸೋಲಿನೊಂದಿಗೇ ಅವರ ಅಭಿಯಾನ ಆರಂಭವಾಗಿತ್ತು.
ಇವುಗಳ ಪೈಕಿ ಎರಡು ಏಕದಿನ ವಿಶ್ವಕಪ್ ಮತ್ತು ಎರಡು ಟಿ-20 ವಿಶ್ವಕಪ್ ಆಡಿದ ಗರಿಮೆ ಅವರದ್ದು. ಶ್ರಿಲಂಕಾದ ಸಂಗಕ್ಕಾರ, ಜಯವರ್ಧನೆ, ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ಈ ಸಾಧನೆ ಮಾಡಿದ ಇತರರು.