9 ಭ್ರಷ್ಟ ಅಧಿಕಾರಿಗಳ ಧನ-ಕನಕಗಳ ಭಂಡಾರ ಬಯಲು..!

ಶುಕ್ರವಾರ, 16 ಜುಲೈ 2021 (08:04 IST)

ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಮೇಲೆ 9 ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ಇಂದು ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಏಕಕಾಲಕ್ಕೆ ರಾಜ್ಯಾದ್ಯಂತ ನಡೆಸಿದ ದಾಳಿ ವೇಳೆ ಕೋಟ್ಯಂತರ ರೂಪಾಯಿ ಆಸ್ತಿ-ಪಾಸ್ತಿ ಪತ್ತೆಯಾಗಿದೆ. ಒಟ್ಟು 310 ಎಸಿಬಿ ಅಧಿಕಾರಿಗಳ 43 ತಂಡಗಳಿಂದ ದಾಳಿ ನಡೆದಿದ್ದು, ಭಾರೀ ಪ್ರಮಾಣದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.


ಎಲ್ಲಾ ಅಧಿಕಾರಿಗಳು ಮನೆ, ಸಂಬಂಧಿಕರ ಮನೆ, ಕಚೇರಿ, ನಿಕಟವರ್ತಿಗಳ ಮನೆಗಳ ಮೇಲೆ ದಾಳಿ ನಡೆಸಿ ಅಕ್ರಮ ಸಂಪಾದನೆಯನ್ನು ಬಯಲಿಗೆಳೆದಿದ್ದಾರೆ. ಆ 9 ಭ್ರಷ್ಟ ಅಧಿಕಾರಿಗಳು ಯಾರು? ಎಷ್ಟೆಲ್ಲಾ ಪ್ರಮಾಣದ ಆಸ್ತಿ, ಮನೆ, ಚಿನ್ನಾಭರಣ ಪತ್ತೆಯಾಗಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
1.ಜಿ.ಶ್ರೀಧರ್- ಕಾರ್ಯಪಾಲಕ ಅಭಿಯಂತರ ಜಿಲ್ಲಾ ನಗರಾಭಿವೃದ್ಧಿ ಕೋಶ, ಡಿಸಿ ಕಚೇರಿ ಮಂಗಳೂರು.
 

•ಮೈಸೂರಿನಲ್ಲಿ ಒಂದು ಮನೆ, ಮಂಡ್ಯ ಜಿಲ್ಲೆ ಕೆಆರ್ ಪೇಟೆ ತಾಲೂಕಿನಲ್ಲಿ ಒಂದು ಮನೆ
•ವಿವಿಧ ನಗರಗಳಲ್ಲಿ ನಾಲ್ಕು ನಿವೇಶನಗಳು
•ಬ್ಯಾಂಕ್ ಉಳಿತಾಯ ಖಾತೆ ಡೆಪಾಸಿಟ್ ಇನ್ಶೂರೆನ್ಸ್, ಡೆಪಾಸಿಟ್ ಬಾಂಡ್ ಗಳು ಪತ್ತೆ.
•ಒಂದು ಕಾರು, ಎರಡು ದ್ವಿಚಕ್ರ, ಚಿನ್ನ ಬೆಳ್ಳಿ ಆಭರಣಗಳು ಬೆಲೆ ಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆ.
2. ಸುರೇಶ್- JE ಗ್ರಾಮೀಣ ನೀರು ಸರಬರಾಜು ಅಭಿವೃದ್ಧಿ ಉಪ ವಿಭಾಗ ಬಸವ ಕಲ್ಯಾಣ, ಬೀದರ್ ಜಿಲ್ಲೆ
•ಬಸವ ಕಲ್ಯಾಣದಲ್ಲಿ ಒಂದು ಮನೆ,
•ಬೀದರ್ ಜಿಲ್ಲೆ ಬಾಲ್ಕಿಯಲ್ಲಿ ಒಂದು ಪೆಟ್ರೋಲ್ ಬಂಕ್,
•ನಾಲ್ಕುನಿವೇಶನ, ವಿವಿಧ ಬ್ಯಾಂಕ್ ಗಳಲ್ಲಿ ಎಫ್ಡಿ ಡೆಪಾಸಿಟ್
•ಬೆಲೆ ಬಾಳುವ ಚಿನ್ನಾಭರಣ, ಒಂದು ದ್ವಿಚಕ್ರ ವಾಹನ ಪತ್ತೆ.
3.ಆರ್ ಪಿ ಕುಲಕರ್ಣಿ ಪ್ರಧಾನ ಇಂಜಿನಿಯರ್ ಮುಖ್ಯ ಯೋಜನಾಧಿಕಾರಿ, ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ, ಬೆಂಗಳೂರು
•ಬೆಂಗಳೂರಲ್ಲಿ ಒಂದು ಮನೆ, ನಾಲ್ಕು ಫ್ಲಾಟ್, ವಿವಿಧ ಕಡೆ ಮೂರು ನಿವೇಶನ.
•ಎರಡು ಕಾರು, ಒಂದು ದ್ವಿಚಕ್ರ ವಾಹನ, ಚಿನ್ನ ಬೆಳ್ಳಿ ಆಭರಣಗಳು.
•ಬ್ಯಾಂಕ್ ಖಾತೆಗಳಲ್ಲಿ ಠೇವಣಿಗಳು, ಬೆಲೆ ಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆ.
4. ಎ ಕೃಷ್ಣಮೂರ್ತಿ- ಹಿರಿಯ ಮೋಟಾರು ವಾಹನ ನಿರೀಕ್ಷಕರು ಕೋರಮಂಗಲ ಆರ್ ಟಿ ಒ ಕಚೇರಿ ಬೆಂಗಳೂರು.
•ಬೆಂಗಳೂರಿನ ಹಂಪಿನಗರದಲ್ಲಿ ಒಂದು ಮನೆ.
•ದೊಮ್ಮಲೂರಿನಲ್ಲಿ ಒಂದುಮನೆ,
•ಬೆಂಗಳೂರಿನಲ್ಲಿ ಒಂದು ಶಾಲಾ ಕಟ್ಟಡ,
•ತುಮಕೂರು ಕೊರಟಗೆರೆಯಲ್ಲಿ ಫಾರ್ಮ್ ಹೌಸ್,
•ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ 30 ಸೈಟ್ ಗಳು.
•ಚಿನ್ನ ಬೆಳ್ಳಿ ಆಭರಣಗಳು, ವಿವಿಧ ಕಡೆಗಳಲ್ಲಿ 82 ಎಕರೆ ಕೃಷಿ ಜಮೀನು
•ನಾಲ್ಕು ದ್ವಿಚಕ್ರ ವಾಹನ, ಮೂರು ಕಾರುಗಳು, ಒಂದು ಟೆಂಪೋ ಮ್ಯಾಕ್ಸ್ ಕ್ಯಾಬ್ ಪತ್ತೆ.
5. ಕೃಷ್ಣ ಎಸ್ ಹೆಬ್ಬೂರು- ಕಾರ್ಯ ನಿರ್ವಾಹಕ ಅಭಿಯಂತರ ಕೆಆರ್ ಐಡಿ ಎಲ್ ಉಡುಪಿ ಜಿಲ್ಲೆ
•ಉಡುಪಿಯಲ್ಲಿ ಒಂದು ಮನೆ, ಬೆಂಗಳೂರು ನಗರ ಜಿಗಣಿಯಲ್ಲಿ ಒಂದು ಮನೆ,
•ಹುಬ್ಬಳ್ಳಿಯಲ್ಲಿ ಒಂದು ಮನೆ,
•ಉಡುಪಿ ಜಿಲ್ಲೆ ಶಿವಳ್ಳಿ ಗ್ರಾಮದಲ್ಲಿ 15.66 ಸೆಂಟ್ಸ್ ನಿವೇಶನ,
•ಎರಡು ದ್ವಿಚಕ್ರ ವಾಹನ, ಒಂದುಕಾರು, ಚಿನ್ನ ಬೆಳ್ಳಿ ಆಭರಣಗಳು.
•ಬೆಲೆ ಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆ.
6. ಟಿ. ವೆಂಕಟೇಶ್- ಉಪ ಅರಣ್ಯ ಸಂರಕ್ಷಣಾಧಿಕಾರಿ ಸಾಮಾಜಿಕ ಅರಣ್ಯ ಮಂಡ್ಯ ಜಿಲ್ಲೆ
•ಮೈಸೂರು ನಗರದಲ್ಲಿ ಎರಡು ಮನೆ,
•ವಿವಿಧ ನಗರಗಳಲ್ಲಿ 9 ನಿವೇಶನ,
•12 ಎಕರೆ ಕೃಷಿ ಜಮೀನು, ಒಂದು ಕಾರು,
•ಮೂರು ದ್ವಿಚಕ್ರ ವಾಹನ, ಚಿನ್ನ ಬೆಳ್ಳಿ ಆಭರಣಗಳು,
•ನಗದು ಹಣ, ಬೆಲೆ ಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆ.
7. ಹೆಚ್ ಆರ್ ಕೃಷ್ಣಮೂರ್ತಿ- ಸಹಾಯಕ ನಿರ್ದೇಶಕರು ಮಾಲೂರು ಟೌನ್ ಫ್ಲಾನಿಂಗ್ ಅಥಾರಿಟಿ ಮಾಲೂರು, ಕೋಲಾರ ಜಿಲ್ಲೆ
•ಬೆಂಗಳೂರು, ಶಿವಮೊಗ್ಗ, ದಾವಣಗೆರೆಯಲ್ಲಿ ಒಂದೊಂದು ಮನೆ,
•ವಿವಿಧ ಪ್ರಮುಖ ನಗರಗಳಲ್ಲಿ ನಾಲ್ಕು ನಿವೇಶನ,
•ಚನ್ನಗಿರಿಯಲ್ಲಿ 15 ಎಕರೆ 15 ಗುಂಟೆ ಕೃಷಿ ಜಮೀನು,
•ಎರಡು ದ್ವಿಚಕ್ರ ವಾಹನ, ಒಂದು ಕಾರು,
•ಚಿನ್ನ ಬೆಳ್ಳಿ ಆಭರಣಗಳು, ಬೆಲೆ ಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆ.
8. ಸಿದ್ದರಾಮ ಮಲ್ಲಿಕಾರ್ಜುನ ಬೀರಾದಾರ AEE -ಒನ್ 10 ಕೆವಿ ನೋಡಲ್ ಅಧಿಕಾರಿ ಕೆಪಿಟಿಸಿಎಲ್, ಪ್ರಭಾರಿ EE - ವಿಜಯಪುರ,
•ವಿಜಯಪುರದಲ್ಲಿ ಮೂರು ವಾಸದ ಮನೆ,
•ವಿವಿಧ ಕಡೆಗಳಲ್ಲಿ ನಾಲ್ಕು ನಿವೇಶನ,
•35 ಎಕರೆ ಕೃಷಿ ಜಮೀನು,
•ಒಂದು ಕಾರು, ಎರಡು ದ್ವಿಚಕ್ರ ವಾಹನ,
•ಚಿನ್ನ ಬೆಳ್ಳಿ ಆಭರಣಗಳು, ಬೆಲೆ ಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆ.
9. ಎ. ಎನ್. ವಿಜಯ್ ಕುಮಾರ್ ಎಲೆಕ್ಟ್ರಿಕಲ್ ಇನ್ಸ್ಪೆಕ್ಟರ್ ಜೆಸ್ಕಾಂ ಬಳ್ಳಾರಿ
•ಬೆಂಗಳೂರು, ಬಳ್ಳಾರಿಯಲ್ಲಿ ತಲಾ ಒಂದು ಮನೆ,
•ವಿವಿಧ ನಗರಗಳಲ್ಲಿ ಎಂಟು ನಿವೇಶನ,
•ಎರಡು ಕಾರು, ಒಂದು ದ್ವಿಚಕ್ರ ವಾಹನ,
•ಚಿನ್ನ ಬೆಳ್ಳಿ ಆಭರಣಗಳು, ಬೆಲೆ ಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ