ಧಾರವಾಡಕ್ಕೆ ಕಾಲಿಟ್ಟ ಅಗ್ನಿಪಥ್ ಪ್ರತಿಭಟನೆ ಪೊಲೀಸರಿಂದ ಲಘು ಲಾಠಿ ಪ್ರಹಾರ

ಶನಿವಾರ, 18 ಜೂನ್ 2022 (14:17 IST)
ಅಗ್ನಿಪಥ್ ಯೋಜನೆ ವಿರೋಧಿಸಿ ಉತ್ತರ ಭಾರತದ ರಾಜ್ಯಗಳಲ್ಲಿ ನಡೆಯುತ್ತಿರುವ ಪ್ರತಿಭಟನೆ ಕರ್ನಾಟಕಕ್ಕೂ ಕಾಲಿಟ್ಟಿದ್ದು,  ಧಾರವಾಡದಲ್ಲಿ ಪೊಲೀಸರು ಲಾಠಿ ಪ್ರಹಾರ ನಡೆಸಿ ಹಲವರನ್ನು ವಶಕ್ಕೆ ಪಡೆದಿದ್ದಾರೆ.
ಧಾರವಾಡದಲ್ಲಿ ನೂರಾರು ಸಂಖ್ಯೆಯಲ್ಲಿ ಯುವಕರ ನಾಯ್ಕ ಅಡ್ಡಾ ಸರ್ಕಲ್ ಬಳಿ ಜಮಾವಣೆಗೊಂಡರು. ಮುಂಜಾಗೃತ ಕ್ರಮವಾಗಿ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.
ಸ್ಥಳಕ್ಕೆ ಎಡಿಸಿ ಶಿವಾನಂದ ಭಜಂತ್ರಿ ಸೇರಿದಂತೆ ಡಿಸಿಪಿ ಶ್ರೀಶೈಲ ಬ್ಯಾಕೋಡ್ ಭೇಟಿ ನೀಡಿ ಯುವಕರ ಮನವಿ ಸ್ವೀಕರಿಸಿ ಗಲಾಟೆ ಮಾಡದಂತೆ ಸೂಚನೆ ನೀಡಿದರು.
ಈ ವೇಳೆ ಯುವಕರ ಪ್ರತಿಭಟನೆ ಕೈಮೀರುವ ಹಂತ ತಲುಪುವ ಮುಂಜಾಗೃತೆಯಿಂದ ಪೊಲೀಸರು ಯುವಕರನ್ನು ಚದುರಿಸಿದರು. ಈ ವೇಳೆ ಪೊಲೀಸರ ಜೊತೆ ಯುವಕರ ಮಾತಿನ ಚಕಮಕಿ ನಡೆಸಿದ ಹಿನ್ನೆಲೆ ಎಲ್ಲರನ್ನು ಪೊಲೀಸರು ರಸ್ತೆಯಿಂದ ಹೊರಗೆ ಹಾಕಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ