ಕೊರೋನಾ ಅಂತ ರಿಲೀಸ್ ಆದ್ರು..! ಮರಳಿ ಬಂದಿಲ್ಲ 2 ಸಾವಿರಕ್ಕೂ ಹೆಚ್ಚು ಖೈದಿಗಳು

ಭಾನುವಾರ, 18 ಜುಲೈ 2021 (17:26 IST)
ದೆಹಲಿ(ಜು.18): ದೆಹಲಿಯಲ್ಲಿ ಕಳೆದ ವರ್ಷ ಮೂರು ಜೈಲುಗಳಿಂದ ಬಿಡುಗಡೆಯಾದ 2,490 ಕೈದಿಗಳು ಮತ್ತೆ ಮರಳಿ ಶರಣಾಗದಿರುವುದು ಪೊಲೀಸ್ ಇಲಾಖೆಗೆ ತಲೆ ನೋವಾಗಿದೆ.
COVID-19 ಕಾರಣದಿಂದಾಗಿ ಈ ಕೈದಿಗಳನ್ನು ಬಿಡುಗಡೆ ಮಾಡಲಾಗಿತ್ತು. ಅವರಲ್ಲಿ ಹಲವರು ಇತರ ರಾಜ್ಯಗಳಿಗೆ ಪಲಾಯನ ಮಾಡಿದ್ದಾರೆ. ಕೆಲವರು ಮತ್ತೆ ಅಪರಾಧಗಳನ್ನು ಮಾಡುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


•             ಕೊರೋನಾ ಸಮಯದಲ್ಲಿ ರಿಲೀಸ್ ಆಗಿದ್ದ ಖೈದಿಗಳು ಪರಾರಿ
•             ಸಿಕ್ಕಿದ್ದೇ ಛಾನ್ಸ್ ಎಂದು ಹೋದ ಖೈದಿಗಳು ಪರಾರಿ

ಸಿಎಂ ವಿರುದ್ಧ ಕೇಸ್ ದಾಖಲಿಸಿದ IAS ಅಧಿಕಾರಿ
ದೆಹಲಿ ಕಾರಾಗೃಹದ ಪ್ರಕಾರ, ಕಳೆದ ವರ್ಷ 6,740 ಕೈದಿಗಳನ್ನು ತುರ್ತು ಪೆರೋಲ್ ಮತ್ತು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಸಾಂಕ್ರಾಮಿಕ ಸಮಯದಲ್ಲಿ ಕೋವಿಡ್ ಪ್ರಕರಣಗಳನ್ನು ತಡೆಗಟ್ಟಲು ಕಳೆದ ವರ್ಷ ಬಿಡುಗಡೆಯಾದ ಕನಿಷ್ಠ 2,400 ಕೈದಿಗಳು ಶರಣಾಗಲು ವಿಫಲರಾಗಿದ್ದಾರೆ.
2,490 ಕೈದಿಗಳನ್ನು ಪತ್ತೆಹಚ್ಚಲು ಮತ್ತು ಮತ್ತೆ ಶರಣಾಗುವಂತೆ ಕೇಳಲು ಇಲಾಖೆ ಈಗ ದೆಹಲಿ ಪೊಲೀಸರನ್ನು ಸಂಪರ್ಕಿಸಿದೆ. ದೆಹಲಿ ಕಾರಾಗೃಹಗಳು ಹಂಚಿಕೊಂಡ ಮಾಹಿತಿಯ ಪ್ರಕಾರ, ಕಳೆದ ವರ್ಷ ತಿಹಾರ್, ಮಂಡೋಲಿ ಮತ್ತು ರೋಹಿಣಿ ಎಂಬ ಮೂರು ಜೈಲುಗಳಿಂದ ಒಟ್ಟು 6,740 ಕೈದಿಗಳನ್ನು ತುರ್ತು ಪೆರೋಲ್ ಮತ್ತು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ