ಮಣಪ್ಪುರಂ ಆಫೀಸ್ ದರೋಡೆ: 19 ಕೆಜಿ ಚಿನ್ನ, 5 ಲಕ್ಷ ದೋಚಿ ಪರಾರಿ

ಭಾನುವಾರ, 18 ಜುಲೈ 2021 (15:18 IST)
ಆಗ್ರಾ(ಜು.17): ಹಗಲು ದರೋಡೆ ಪ್ರಕರಣದಲ್ಲಿ, ಐದು ದರೋಡೆಕೋರರ ತಂಡವು ಉತ್ತರ ಪ್ರದೇಶದ ಆಗ್ರಾದ ಕಮಲಾ ನಗರ ಪ್ರದೇಶದಲ್ಲಿರುವ ಮಣಪ್ಪುರಂ ಗೋಲ್ಡ್ ಲೋನ್ ಆಫೀಸ್ನಿಂದ ಶನಿವಾರ 9.5 ಕೋಟಿ ಮೌಲ್ಯದ 19 ಕಿಲೋಗ್ರಾಂ ಚಿನ್ನವನ್ನು ಮತ್ತು 5 ಲಕ್ಷ ರೂ. ದೋಚಿದೆ. ಅಪರಾಧ ನಡೆದ ಎರಡು ಗಂಟೆಗಳ ನಂತರ ನಡೆದ ಪೊಲೀಸ್ ಎನ್ಕೌಂಟರ್ನಲ್ಲಿ ಐವರು ಶಂಕಿತರಲ್ಲಿ ಇಬ್ಬರು ಪೊಲೀಸರ ಗುಂಡಿಗೆ ಬಲಿಯಾಗಿದ್ದಾರೆ. 

•             ಮಣಪ್ಪುರಂ ಆಫೀಸ್ ದೋಚಿದ ಸಶಸ್ತ್ರಧಾರಿಗಳು
•             19 ಕೆಜಿ ಚಿನ್ನ, 5 ಲಕ್ಷ ದರೋಡೆ

ಶಸ್ತ್ರ ಸಮೇತ ಬಂದ ಆರೋಪಿಗಳು ಮಣಪ್ಪುರಂ ಚಿನ್ನದ ಸಾಲ ಹಣಕಾಸು ಸಂಸ್ಥೆಯ ಕಚೇರಿಗೆ ಪ್ರವೇಶಿಸಿದ್ದಾರೆ. ಅವರು ತಮ್ಮ ಗುರುತನ್ನು ಮರೆಮಾಚಲು ಮುಖವಾಡಗಳು ಮತ್ತು ಕ್ಯಾಪ್ಗಳನ್ನು ಹಾಕಿದ್ದರು. ಅವರು ಸಿಬ್ಬಂದಿಯನ್ನು ಒತ್ತೆಯಾಳುಗಳಾಗಿ ತೆಗೆದುಕೊಂಡು ಸುಮಾರು 9.5 ಕೋಟಿ ಮೌಲ್ಯದ 19 ಕಿಲೋಗ್ರಾಂ ಚಿನ್ನ ಮತ್ತು ಶಾಖೆಯಿಂದ 5 ಲಕ್ಷ ರೂ ದೋಚಿದ್ದಾರೆ. 20 ನಿಮಿಷಗಳಲ್ಲಿ ಅಪರಾಧ ನಡೆಸಿದ್ದಾರೆ.
ಉತ್ತರ ಪ್ರದೇಶ, ಮಹಿಳೆ ಮೇಲೆ ಮಂಡಿಯೂರಿ ಕುಳಿತ ಪೊಲೀಸಪ್ಪ:ವಿಡಿಯೋ ವೈರಲ್!
ಪೊಲೀಸರು ಮಾಹಿತಿ ನೀಡಿದ ನಂತರ ಆರೋಪಿಗಳನ್ನು ಬಂಧಿಸಲು ಕ್ರಮ ಕೈಗೊಂಡಿದ್ದಾರೆ. ಈ ಬಗ್ಗೆ ಜಿಲ್ಲೆಯ ಪೊಲೀಸ್ ಠಾಣೆಗಳಲ್ಲಿ ಎಚ್ಚರಿಕೆ ನೀಡಲಾಯಿತು. ಅಪರಾಧ ಸ್ಥಳದಿಂದ ಸುಮಾರು 17 ಕಿ.ಮೀ ದೂರದಲ್ಲಿ ಪೊಲೀಸ್ ತಂಡ ಆರೋಪಿಗಳನ್ನು ಪತ್ತೆ ಮಾಡಿದೆ. ಪೊಲೀಸರು ಅವರನ್ನು ಬಂಧಿಸಲು ಪ್ರಯತ್ನಿಸಿದಾಗ, ಅವರು ಗುಂಡು ಹಾರಿಸಿದ್ದಾರೆ. ಪ್ರತಿಯಾಗಿ ಪೊಲೀಸ್ ತಂಡವೂ ಗುಂಡು ಹಾರಿಸಿದ್ದು, ಇಬ್ಬರು ಆರೋಪಿಗಳು ಸಾವನ್ನಪ್ಪಿದ್ದಾರೆ. ಮೃತರನ್ನು ಮನೀಶ್ ಪಾಂಡೆ ಮತ್ತು ನಿರ್ಧೋಷ್ ಕುಮಾರ್ ಎಂದು ಗುರುತಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ