ಚಳಿಗಾಲಕ್ಕೆ ಮುನ್ನ ಡಾ ಸಿಎನ್ ಮಂಜುನಾಥ್ ಅವರ ಈ ಎಚ್ಚರಿಕೆ ಗಮನಿಸಿ

Krishnaveni K

ಮಂಗಳವಾರ, 9 ಸೆಪ್ಟಂಬರ್ 2025 (11:37 IST)
ಚಳಿಗಾಲದಲ್ಲಿ ಆರೋಗ್ಯ ಸಮಸ್ಯೆಗಳೂ ಹೆಚ್ಚಾಗುತ್ತವೆ. ಇನ್ನೇನು ಮಳೆಗಾಲ ಮುಗಿದು ಚಳಿಗಾಲ ಬರುತ್ತಿದ್ದು ಖ್ಯಾತ ಹೃದ್ರೋಗ ತಜ್ಞ ಡಾ ಸಿಎನ್ ಮಂಜುನಾಥ್ ಅವರ ಈ ಎಚ್ಚರಿಕೆಯನ್ನು ತಪ್ಪದೇ ಗಮನಿಸಿ.

ಚಳಿಗಾಲದಲ್ಲಿ ಕೇವಲ ಶೀತ ಸಂಬಂಧೀ ಆರೋಗ್ಯ ಸಮಸ್ಯೆ ಮಾತ್ರವಲ್ಲ. ಹೃದಯದ ಸಮಸ್ಯೆಗಳು ಬರುವುದೂ ಹೆಚ್ಚಾಗುತ್ತದೆ. ಇದಕ್ಕೆ ಕಾರಣವೇನು ಎಂಬ ಬಗ್ಗೆ ಡಾ ಸಿಎನ್ ಮಂಜುನಾಥ್ ಅವರು ಸಂವಾದ ಕಾರ್ಯಕ್ರಮವೊಂದರಲ್ಲಿ ವಿವರವಾಗಿ ಹೇಳಿದ್ದರು.

ಚಳಿಗಾಲದಲ್ಲಿ ನಮ್ಮ ನರಗಳು ಕುಗ್ಗುವಿಕೆಗೊಳಗಾಗುತ್ತವೆ. ಇದರಿಂದ ರಕ್ತಪರಿಚಲನೆ ಕಡಿಮೆಯಾಗುತ್ತದೆ. ಉದಾಹರಣೆಗೆ ನೀವು ತಣ್ಣೀರಿನಲ್ಲಿ ಸ್ನಾನ ಮಾಡುವಾಗ ಒಮ್ಮೆ ಮೈ ನಡುಗಿ, ಮೈ ಕುಗ್ಗಿಸುತ್ತೇವೆ. ಅದೇ ರೀತಿ ವಿಪರೀತ ಚಳಿಗೆ ನಮ್ಮ ನರಗಳು ಕುಗ್ಗುವಿಕೆಗೊಳಗಾಗುತ್ತವೆ. ಇದರಿಂದ ರಕ್ತ ಪರಿಚಲನೆ ಕಡಿಮೆಯಾಗುತ್ತದೆ.

ಇದರಿಂದ ಹೃದಯಕ್ಕೂ ರಕ್ತ ಪೂರೈಕೆ ಕಡಿಮೆಯಾಗಬಹುದು. ವಿಶೇಷವಾಗಿ ಉತ್ತರ ಭಾರತದಲ್ಲಿ ವಿಪರೀತ ಶೀತ ದಾಖಲಾಗುವ ಸ್ಥಳಗಳಲ್ಲಿ ಚಳಿಯಿಂದಾಗಿ ಹೃದಯದ ಸಮಸ್ಯೆಯಾಗುವ ಸಾಧ್ಯತೆ ಹೆಚ್ಚು. ಈ ವಾತಾವರಣದಲ್ಲಿ ಹೃದಯಕ್ಕೂ ರಕ್ತ ಪರಿಚಲನೆ ಕಡಿಮೆಯಾಗಿ ಹೃದಯಾಘಾತವಾಗು ಸಂಭವವಿರುತ್ತದೆ. ಹೀಗಾಗಿಯೇ ದುರ್ಬಲ ಹೃದಯಿಗಳು ವಿಪರೀತ ಶೈತ್ಯ ವಾತಾವರಣಕ್ಕೆ ಮೈ ಒಡ್ಡದಿರುವುದೇ ಉತ್ತಮ ಎಂದು ಅವರು ಹೇಳಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ