ಅಧಿಕ ರಕ್ತದೊತ್ತಡದ ಆರಂಭಿಕ ಲಕ್ಷಣಗಳೇನು

Krishnaveni K

ಶುಕ್ರವಾರ, 5 ಸೆಪ್ಟಂಬರ್ 2025 (11:21 IST)

ನಮ್ಮಲ್ಲಿ ಇಂದು ಜೀವನಶೈಲಿಯ ಸಮಸ್ಯೆಯಿಂದಾಗಿ ಅನೇಕರಲ್ಲಿ ರಕ್ತದೊತ್ತಡ ಸಮಸ್ಯೆಯಿದೆ. ಹಾಗಿದ್ದರೆ ಅಧಿಕ ರಕ್ತದೊತ್ತಡ ಸಮಸ್ಯೆಯ ಆರಂಭಿಕ ಲಕ್ಷಣಗಳೇನು ತಿಳಿದುಕೊಳ್ಳಿ.

ಅಧಿಕ ರಕ್ತದೊತ್ತಡ ಎನ್ನುವುದು ಹಲವು ಖಾಯಿಲೆಗಳಿಗೆ ಕಾರಣವಾಗಬಹುದು. ವಿಶೇಷವಾಗಿ ಹೃದಯದ ಸಮಸ್ಯೆಗೆ ಅಧಿಕ ರಕ್ತದೊತ್ತಡವೇ ಪ್ರಮುಖ ಕಾರಣವಾಗುತ್ತದೆ. ಒತ್ತಡದ ಜೀವನ ಶೈಲಿ, ಆಹಾರ ಶೈಲಿಯಿಂದ ರಕ್ತದೊತ್ತಡ ಸಮಸ್ಯೆ ಬರುತ್ತದೆ.

120/80 ರಕ್ತದೊತ್ತಡಿದ್ದಾಗ ಇದು ನಾರ್ಮಲ್ ಎನ್ನಬಹುದು. ಆದರೆ ಇದರಿಂದ ಹೆಚ್ಚಾದರೆ ರಕ್ತದೊತ್ತಡ ಸಮಸ್ಯೆಯಿದೆ ಎನ್ನಬಹುದು. ಕೆಲವರಿಗೆ ಹೆಚ್ಚು ಲಕ್ಷಣಗಳೇ ಕಾಣಿಸಿಕೊಳ್ಳುವುದಿಲ್ಲ. ಚಿಕ್ಕದಾಗಿ ತಲೆ ಸುತ್ತುವುದು ಕಂಡುಬಂದರೆ ಅದನ್ನು ಅವಾಯ್ಡ್ ಮಾಡುತ್ತಾರೆ.

ಆದರೆ ಬಹುತೇಕರು ತಮಗೆ ರಕ್ತದೊತ್ತಡ ಸಮಸ್ಯೆಯಿದೆ ಎಂದು ಗೊತ್ತಿಲ್ಲದೇ ಜೀವನ ಮಾಡುತ್ತಿರುತ್ತಾರೆ. ಹೀಗಾಗಿ ಸಣ್ಣ ತಲೆಸುತ್ತು ಬರುತ್ತಿದ್ದರೂ ತಕ್ಷಣವೇ ಬಿಪಿ ಚೆಕ್ ಮಾಡಿಸಿಕೊಳ್ಳಬೇಕು. ತಲೆನೋವು ಬರುವುದು, ಎದೆಯಲ್ಲಿ ಚುಚ್ಚಿದಂತೆ ನೋವಾಗುವುದು, ಕಣ್ಣು ಮಂಜಾದಂತಾಗುವುದು, ಉಸಿರಾಟದಲ್ಲಿ ಏರುಪೇರಾದರೆ ಅಧಿಕ ರಕ್ತದೊತ್ತಡವಿದೆ ಎಂದು ತಿಳಿದುಕೊಳ್ಳಬಹುದು. ಇಂತಹ ಸಂದರ್ಭದಲ್ಲಿ ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ