ಊಟ ಮಾಡಿ ನಡೆಯುವಾಗ ದವಡೆ ನೋವು ಬಂದರೆ ಏನರ್ಥ: ಡಾ ಸಿಎನ್ ಮಂಜುನಾಥ್ ಟಿಪ್ಸ್
ಹೃದಯಾಘಾತದ ಲಕ್ಷಣಗಳು ಅನೇಕ ಇರಬಹುದು. ಅದರಲ್ಲೂ ವಿಶೇಷವಾಗಿ ಹೃದಯಾಘಾತದ ಅಥವಾ ಹೃದಯದ ಸಮಸ್ಯೆ ಪತ್ತೆ ಹೆಚ್ಚಲು ವಾಕಿಂಗ್ ಮಾಡುವಾಗ ಸುಸ್ತಾಗುವುದು, ಎದೆ ಉರಿ ಬರುವುದು ಆಗಬಹುದು.
ಇದಲ್ಲದೇ ಊಟ ಮಾಡಿದ ಬಳಿಕ ದವಡೆ ನೋವು ಬರಬಹುದು. ಇದು ಹೃದಯದ ರಕ್ತನಾಳಗಳಲ್ಲಿ ಸಮಸ್ಯೆಯಾಗಿದೆ ಎಂದು ಸೂಚಿಸುತ್ತದೆ. ಹೀಗಾಗಿ ಊಟ ಮಾಡಿದ ಬಳಿಕ ನಡೆಯುವಾಗ ದವಡೆ ನೋವು ಬಂದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು.
ಹೃದಯಾಘಾತದ ಲಕ್ಷಣವನ್ನು ಕೆಲವರು ಅಸಿಡಿಟಿ ಎಂದು ಕನ್ ಫ್ಯೂಸ್ ಆಗುತ್ತಾರೆ. ಹೊಟ್ಟೆ ಉರಿ ಬಂದಾಗ ಕೆಲವರು ಅಸಿಡಿಟಿ ಎಂದು ಅವಗಣನೆ ಮಾಡುತ್ತಾರೆ. ಆದರೆ ಹೃದಯದ ಕೆಳಭಾಗಕ್ಕೆ ಹೃದಯಾಘಾತವಾದಾಗ ಹೊಟ್ಟೆ ಉರಿ ಬರಬಹುದು. ಹೀಗಾಗಿ ಇದರ ಬಗ್ಗೆ ಎಚ್ಚರವಹಿಸಬೇಕು ಎಂದು ಅವರು ಸಂವಾದವೊಂದರಲ್ಲಿ ಹೇಳಿದ್ದಾರೆ.