ಬೆಂಗಳೂರು: ನಾಯಿ ಕಚ್ಚಿದ್ರೆ ನಮ್ಮ ದೇಹಕ್ಕೆ ಎಷ್ಟು ಮಾರಕವೋ ಬೆಕ್ಕು ಕಚ್ಚಿದ್ರೂ ಅಷ್ಟೇ ಡೇಂಜರ್. ಬೆಕ್ಕು ಕಚ್ಚಿದ್ರೆ ಎಷ್ಟು ಅಪಾಯಕಾರೀ ಏನೆಲ್ಲಾ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಇಲ್ಲಿದೆ ವಿವರ.
ಮನುಷ್ಯರು ಅತಿಯಾಗಿ ಮುದ್ದಿಸುವ ಸಾಕು ಪ್ರಾಣಿಗಳಲ್ಲಿ ಬೆಕ್ಕು ಕೂಡಾ ಒಂದು. ಬೆಕ್ಕು ಕಚ್ಚಿದರೆ, ಉಗುರಿನಿಂದ ತರಚಿ ಗಾಯವಾದರೆ ಅದಕ್ಕೆ ತಕ್ಷಣವೇ ಚುಚ್ಚು ಮದ್ದು ತೆಗೆದುಕೊಳ್ಳಬೇಕು. ಇಲ್ಲದೇ ಹೋದರೆ ಅದರಿಂದ ದೇಹದಲ್ಲಿ ಅಲರ್ಜಿ, ಸಾವಿಗೂ ಕಾರಣವಾಗಬಹುದು.
ಬೆಕ್ಕು ಕಚ್ಚುವುದು ಕೂಡಾ ನಾಯಿ ಕಚ್ಚಿದಷ್ಟೇ ಡೇಂಜರ್. ಹೀಗಾಗಿ ತಕ್ಷಣವೇ ವೈದ್ಯರ ಬಳಿ ಹೋಗಬೇಕು. ಬೆಕ್ಕು ಕಚ್ಚುವುದರಿಂದ ಚರ್ಮ ಕೆಂಪಗಾಗುವುದು, ಊದಿಕೊಳ್ಳುವುದು, ನೋವು ಕಾಣಿಸಿಕೊಳ್ಳುವುದು, ಗಾಯ ಕೀವಾಗಬಹುದು. ಕೆಲವೊಮ್ಮೆ ಜ್ವರವೂ ಬರಬಹುದು. ಇದು ಆರಂಭಿಕ ಲಕ್ಷಣಗಳಾಗಿರಬಹುದು.
ಬೆಕ್ಕು ಕಚ್ಚುವುದರಿಂದ ಆಗುವ ಗಾಯ ಮಾತ್ರವಲ್ಲ, ಬೆಕ್ಕಿನ ಸಲೈವಾ (ಜೊಲ್ಲು ರಸ) ಕೂಡಾ ಅಷ್ಟೇ ಡೇಂಜರ್. ಬೆಕ್ಕಿನ ಜೊಲ್ಲು ರಸದಿಂದ ರೇಬಿಸ್ ಖಾಯಿಲೆ ಬರಬಹುದು. ಇದು ಮಾರಣಾಂತಿಕವಾಗಬಹುದು. ಹೀಗಾಗಿ ಬೆಕ್ಕು ಕಚ್ಚಿದ ತಕ್ಷಣ ಚುಚ್ಚು ಮದ್ದು ಪಡೆಯುವುದು ಮುಖ್ಯ.