ಇತ್ತೀಚೆಗೆ ಹೃದಯಾಘಾತದ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಪ್ರತಿಯೊಬ್ಬರೂ ಹೃದಯದ ಆರೋಗ್ಯದ ಕಾಳಜಿ ಮಾಡಲು ಮುಂದಾಗುತ್ತಿದ್ದಾರೆ. ಖ್ಯಾತ ಹೃದ್ರೋಗ ತಜ್ಞ ಡಾ ಸಿಎನ್ ಮಂಜುನಾಥ್ ಪ್ರಕಾರ ದಿನಕ್ಕೆ ನಾವು ಎಷ್ಟು ಹೊತ್ತು ವಾಕಿಂಗ್ ಮಾಡಿದರೆ ಹೃದಯ ಆರೋಗ್ಯವಾಗಿರುತ್ತದೆ ನೋಡಿ.
ಹೃದಯದ ಆರೋಗ್ಯ ಚೆನ್ನಾಗಿರಬೇಕೆಂದರೆ ದೇಹಕ್ಕೂ ಚಟುವಟಿಕೆ ಬೇಕು. ದೈಹಿಕ ಚಟುವಟಿಕೆಗಳು ಸರಾಗವಾಗಿದ್ದರೆ ಹೃದಯಕ್ಕೆ ರಕ್ತ ಪೂರೈಕೆ ಮಾಡುವ ರಕ್ತನಾಳಗಳೂ ಆರೋಗ್ಯವಾಗಿರುತ್ತದೆ. ಅದರಲ್ಲೂ ಹೃದಯದ ಆರೋಗ್ಯಕ್ಕೆ ವ್ಯಾಯಾಮ, ವಾಕಿಂಗ್ ಉತ್ತಮ ಎನ್ನುತ್ತಾರೆ. ಹಾಗಿದ್ದರೆ ದಿನಕ್ಕೆ ಎಷ್ಟುಹೊತ್ತು ವಾಕಿಂಗ್ ಮಾಡಬೇಕು ಎಂದು ತಿಳಿದುಕೊಳ್ಳುವುದೂ ಅಷ್ಟೇ ಮುಖ್ಯ.
ಡಾ ಸಿಎನ್ ಮಂಜುನಾಥ್ ಹೇಳುವ ಪ್ರಕಾರ ಹೃದಯದ ಆರೋಗ್ಯ ಚೆನ್ನಾಗಿರಬೇಕೆಂದರೆ ನಾವು ದಿನಕ್ಕೆ 45 ನಿಮಿಷ ವಾಕಿಂಗ್ ಮಾಡಬೇಕು. ಪ್ರತಿನಿತ್ಯ 45 ನಿಮಿಷಗಳಷ್ಟು ವಾಕಿಂಗ್ ಮಾಡುವುದರಿಂದ ಹೃದಯದ ಆರೋಗ್ಯ ಚೆನ್ನಾಗಿರುತ್ತದೆ. ಹೃದಯ ನಮಗೆ ಹೇಳುತ್ತದಂತೆ. ನೀನು ನನಗಾಗಿ ಚಲಿಸು, ನಾನು ನಿನಗಾಗಿ ನಿರಂತರವಾಗಿ ಚಲಿಸುತ್ತೇನೆ.
ನಡೆಯಲು ಯಾವ ಹೊತ್ತಾದರೂ ತೊಂದರೆಯಿಲ್ಲ. ಬೆಳಿಗ್ಗೆಯೇ ವಾಕಿಂಗ್ ಮಾಡಬೇಕೆಂದೇನಿಲ್ಲ. ಪರಿಸರದಲ್ಲಿ ಆರು ಜನ ವೈದ್ಯರಿದ್ದಾರೆ. ಮೊದಲನೆಯವನು ಸೂರ್ಯ. ಅವನ ಕಿರಣ ಬಿದ್ದರೆ ವಿಟಮಿನ್ ಡಿ ಬರುತ್ತದೆ. ಎರಡನೆಯದ್ದು ಆಹಾರ. ಮೂರನೆಯದ್ದು ವಿಶ್ರಾಂತಿ. ನಾಲ್ಕನೆಯದ್ದು ಸ್ನೇಹ. ಐದನೆಯದ್ದು ಆತ್ಮಸ್ಥೈರ್ಯ, ಇದುವೇ ಜೀವ ರಕ್ಷಕ. ಆರನೆಯದ್ದು ನಗು. ಇದು ಯೂನಿವರ್ಸಲ್ ಭಾಷೆ. ಇದೆಲ್ಲವೂ ಉಚಿತವಾದುದು. ಇದನ್ನು ಪಾಲಿಸಿಕೊಂಡು ಬಂದರೆ ಆರೋಗ್ಯ ಚೆನ್ನಾಗಿರುತ್ತದೆ ಎಂದು ಹಲವು ಸಮಯದ ಹಿಂದೆಯೇ ಡಾ ಸಿಎನ್ ಮಂಜುನಾಥ್ ಹೇಳಿದ್ದಾರೆ.