ಇತ್ತೀಚೆಗಿನ ದಿನಗಳಲ್ಲಿ ಬಂಜೆತನ ಹೆಚ್ಚಾಗುತ್ತಿದೆ. ಖ್ಯಾತ ಸ್ತ್ರೀರೋಗ ತಜ್ಞೆ ಡಾ ಪದ್ಮಿನಿ ಪ್ರಸಾದ್ ಹಿಂದೊಮ್ಮೆ ಸಂವಾದವೊಂದರಲ್ಲಿ ಪುರುಷ ಮತ್ತು ಮಹಿಳೆಯರಲ್ಲಿ ಬಂಜೆತನಕ್ಕೆ ಕಾರಣವಾಗಬಹುದಾದ ಅಂಶವೇನು ಎಂದು ಹೇಳಿದ್ದರು.
ಅನೇಕರು ಇತ್ತೀಚೆಗೆ ಒಂದು ಮಗು ಮಾಡಿಕೊಳ್ಳುವುದೂ ಕಷ್ಟ. ಕೆಲವರಲ್ಲಿ ಅದೂ ಇಲ್ಲ ಎಂಬ ಸ್ಥಿತಿಯಾಗಿದೆ. ಇದಕ್ಕೆ ಕಾರಣ ನಾವು ಸೇವಿಸುವ ಆಹಾರ, ಪರಿಸರವೇ ಎಂದು ಡಾ ಪದ್ಮಿನಿ ಪ್ರಸಾದ್ ಆ ಸಂವಾದದಲ್ಲಿ ವಿವರವಾಗಿ ಹೇಳಿದ್ದರು.
ನಾವು ಆರೋಗ್ಯಕ್ಕೆ ಉತ್ತಮ ಎಂದು ಸೇವಿಸುವ ಹಣ್ಣು, ತರಕಾರಿಗಳಲ್ಲಿ ಹಾನಿಕಾರಕ ರಾಸಾಯನಿಕಗಳಿರಬಹುದು. ಇದು ಹಾರ್ಮೋನ್ ಗಳ ರೀತಿಯಲ್ಲಿ ಕೆಲಸ ಮಾಡಿ ಮುಟ್ಟಿನ ತೊಂದರೆ, ಅಂಡಾಣು ಬಿಡುಗಡೆಯಾಗದೇ ಸಮಸ್ಯೆಯಾಗಬಹುದು. ಪುರುಷರಲ್ಲಿ ವೀರ್ಯಾಣುವಿನ ಚಲನೆ, ಸಂಖ್ಯೆಯ ಮೇಲೆ ಪರಿಣಾಮ ಬೀರಿ ಬಂಜೆತನಕ್ಕೆ ಕಾರಣವಾಗಬಹುದು.
ಅದೇ ರೀತಿ, ರಸ್ತೆಗಿಳಿದರೆ ಧೂಳು, ಹೊಗೆ ಇತ್ಯಾದಿ ವಾಯುಮಾಲಿನ್ಯ ಸಮಸ್ಯೆಗಳೂ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಇಂತಹ ದೈನಂದಿನ ವಿಚಾರಗಳೇ ಪುರುಷ ಮತ್ತು ಮಹಿಳೆಯರಲ್ಲಿ ಫಲವಂತಿಕೆಯ ಮೇಲೆ ಪರಿಣಾಮ ಬೀರಬಹುದು ಎಂದು ಅವರು ಹೇಳಿದ್ದರು.