ಇತ್ತೀಚೆಗಿನ ದಿನಗಳಲ್ಲಿ ಹೆಣ್ಣು ಮಕ್ಕಳು ಬೇಗ ಮೈ ನೆರೆಯುತ್ತಿರುವುದು ಯಾಕೆ ಎಂಬ ಪ್ರಶ್ನೆ ಅನೇಕರಲ್ಲಿದೆ. ಇದಕ್ಕೆ ಖ್ಯಾತ ಸ್ತ್ರೀರೋಗ ತಜ್ಞೆ ಡಾ ಪದ್ಮಿನಿ ಪ್ರಸಾದ್ ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಉತ್ತರ ನೀಡಿದ್ದಾರೆ.
ಬಹಳ ಬೇಗ ಹೆಣ್ಣು ಮಕ್ಕಳದಲ್ಲಿ ದೇಹದ ಬೆಳವಣಿಗೆ, ಮಾನಸಿಕ ಬದಲಾವಣೆ, ಪರಿಸರದಲ್ಲಿ ಆಗಿರುವ ಬದಲಾವಣೆ ಇದಕ್ಕೆ ಕಾರಣವಾಗುತ್ತಿದೆ. ಜೊತೆಗೆ ಆಹಾರ ಶೈಲಿ ಬದಲಾವಣೆ ಮುಖ್ಯವಾಗಿ ಕಾರಣವಾಗುತ್ತಿದೆ. ಜಂಕ್ ಫುಡ್ ಗಳು ದೇಹ ತೂಕ ಹೆಚ್ಚಿಸುತ್ತಿದೆ. ಆಹಾರ ಶೈಲಿಯಿಂದ ನಿದ್ರೆಯ ಅವಧಿಯಲ್ಲಿ ವ್ಯತ್ಯಾಸವಾಗಿದೆ. ಇದು ದೇಹದ ಬೆಳವಣಿಗೆಯ ಮೇಲೂ ಪರಿಣಾಮ ಬೀರುತ್ತಿದೆ.
ಇದೆಲ್ಲವೂ ಜೈವಿಕ ಚಕ್ರದ ಮೇಲೆ ಪರಿಣಾಮ ಬೀರುತ್ತಿದೆ. ಮೊದಲೆಲ್ಲಾ ಜೀವನ ಶೈಲಿ ಒಂದು ಪದ್ಧತಿ ಪ್ರಕಾರ ನಡೆಯುತ್ತಿತ್ತು. ಆದರೆ ಈಗ ಜೀವನ ಶೈಲಿ ಬದಲಾಗಿದೆ. ನಿದ್ರೆಯ ಅವಧಿ, ಅಭ್ಯಾಸಗಳು ಬದಲಾವಣೆಯಾಗಿದೆ. ಇದೆಲ್ಲಾ ಕಾರಣಗಳಿಂದ ಹಾರ್ಮೋನ್ ಉತ್ಪತ್ತಿ, ಅಂಡಾಶಯ ಉತ್ಪತ್ತಿ ಕಾರ್ಯ ಬೇಗನೇ ಆರಂಭವಾಗುತ್ತಿದೆ.
ಇದರಿಂದಾಗಿ ಇತ್ತೀಚೆಗಿನ ದಿನಗಳಲ್ಲಿ ಹೆಣ್ಣು ಮಕ್ಕಳು ಬೇಗನೇ ಮೈ ನೆರೆಯುತ್ತಿದ್ದಾರೆ. ಇದೇ ಕಾರಣಕ್ಕೆ 6-9 ವರ್ಷದ ಮಕ್ಕಳೂ ಮೈ ನೆರೆಯುತ್ತಿದ್ದಾರೆ ಎಂದು ಖಾಸಗಿ ವಾಹಿನಿ ಸಂದರ್ಶನದಲ್ಲಿ ಡಾ ಪದ್ಮಿನಿ ಪ್ರಸಾದ್ ಹೇಳಿದ್ದಾರೆ.