ಇತ್ತೀಚೆಗಿನ ದಿನಗಳಲ್ಲಿ ಹೃದಯಾಘಾತ ಅದರಲ್ಲೂ ಆರೋಗ್ಯವಂತರಂತೆ ತೋರುವ ವ್ಯಕ್ತಿಗಳೂ ಸಡನ್ ಹೃದಯಾಘಾತವಾಗುವುದರಿಂದ ಸಾವನ್ನಪ್ಪುತ್ತಿದ್ದಾರೆ. ಹೀಗಾಗಿ ಹೃದಯಾಘಾತವಾಗದಂತೆ ಏನು ಮಾಡಬಹುದು ಎಂದು ಖ್ಯಾತ ಹೃದ್ರೋಗ ತಜ್ಞ ಡಾ ದೇವಿ ಪ್ರಸಾದ್ ಶೆಟ್ಟಿ ಸಂದರ್ಶನವೊಂದರಲ್ಲಿ ಹೇಳಿದ್ದರು. ಅದನ್ನು ತಪ್ಪದೇ ಪಾಲಿಸಬಹುದು.
ಖಾಸಗಿ ವಾಹಿನಿಯೊಂದರ ಆರೋಗ್ಯ ಕಾರ್ಯಕ್ರಮದಲ್ಲಿ ಡಾ ದೇವಿಪ್ರಸಾದ್ ಶೆಟ್ಟಿ ಹೃದಯಾಘಾತವಾಗದಂತೆ ತಡೆಯಲು ಏನು ಮಾಡಬೇಕು ಎಂದು ಅಮೂಲ್ಯ ಸಲಹೆಯೊಂದನ್ನು ಕೊಟ್ಟಿದ್ದಾರೆ. ಇದನ್ನು ತಪ್ಪದೇ ಗಮನಿಸಿ.
ಇಂದಿನ ದಿನಗಳಲ್ಲಿ ಸಣ್ಣ ವಯಸ್ಸಿನವೂ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಒಂದು ವೇಳೆ ನಿಮ್ಮ ವಯಸ್ಸು 40 ದಾಟಿದಲ್ಲಿ ಪ್ರತಿ 10 ವರ್ಷಕ್ಕೊಮ್ಮೆ ಇಸಿಜಿ, ಆಂಜಿಯೋಗ್ರಾಮ್ ಮಾಡಿಸಿಕೊಳ್ಳುತ್ತಿರುವುದು ಉತ್ತಮ ಎಂದು ಡಾ ದೇವಿಪ್ರಸಾದ್ ಶೆಟ್ಟಿ ಹೇಳುತ್ತಾರೆ.
ಯಾಕೆಂದರೆ ಹೃದಯದಲ್ಲಿ ಆಗುವ ಸಣ್ಣ ಬ್ಲಾಕೇಜ್ ಗಳು, ಸಮಸ್ಯೆಗಳನ್ನು ಈ ಪರೀಕ್ಷೆಗಳಿಂದ ತಿಳಿದುಕೊಳ್ಳಬಹುದಾಗಿದೆ. ಹೀಗಾಗಿ ಹಠಾತ್ ಹೃದಯಾಘಾತಗಳನ್ನು ತಪ್ಪಿಸಬಹುದು ಎಂಬುದು ಅವರ ಸಲಹೆಯಾಗಿದೆ. ಆರೋಗ್ಯವಂತರಂತೆ ಮೇಲ್ನೋಟಕ್ಕೆ ಕಂಡರೂ ಒಳಗಿನಿಂದ ಸಮಸ್ಯೆಗಳಿರಬಹುದು. ಇದನ್ನು ಇಂತಹ ಪರೀಕ್ಷೆಗಳಿಂದ ತಿಳಿಯಬಹುದು ಎಂಬುದು ಅವರ ಸಲಹೆಯಾಗಿದೆ.