ಬೆಂಗಳೂರಿನಲ್ಲಿ ಗ್ರೇಸ್ ಅಂಡ್ ಗ್ಲೋ ಸೆಂಟರ್ ಆರಂಭ

ಗುರುವಾರ, 23 ಜೂನ್ 2022 (15:46 IST)
ಕಾಸ್ಮೆಟಾಲಜಿ, ಆಯುವೇದ, ಪಂಚಕರ್ಮ ಹಾಗೂ ವರ್ಮಾಲಜಿ (ಮರ್ಮ ಕಲೆ) ಚಿಕಿತ್ಸೆಯನ್ನು ಪ್ರಾಚೀನ ವ್ಯೆದ್ಯ ಪದ್ಧತಿಗನುಗುಣವಾಗಿ ಜನರಿಗೆ ವಿಭಿನ್ನ ಚಿಕಿತ್ಸೆ ನೀಡುವ ಸಲುವಾಗಿ ಬೆಂಗಳೂರಿನ ಜೆ.ಪಿ ನಗರದಲ್ಲಿ ಗ್ರೇಸ್ ಅಂಡ್ ಗ್ಲೋ  ಸೆಂಟರ್ ಶುಭಾರಂಭವಾಗಿದೆ.
ಗ್ರೇಸ್ & ಗ್ಲೋ ಸೆಂಟರ್ ಶುಭಾರಂಭ ಕಾರ್ಯಕ್ರಮದಲ್ಲಿ ಮ್ಯಾನೆಜಿಂಗ್ ಪಾರ್ಟನರ್ ಪೆÇ್ರಫೆಸರ್ ಡಾ. ಎ.ವಿ. ಶ್ರೀನಿವಾಸನ್, ಶಾಸಕಿ ಸೌಮ್ಯರೆಡ್ಡಿ, ಮಾಜಿ ಮಹಾಪೌರರಾದ ಗಂಗಾಂಬಿಕೆ ಮಲ್ಲಿಕಾರ್ಜುನ್, “ ಕನ್ನಡತಿ “ ಖ್ಯಾತಿಯ ನಟಿ ರಂಜನಿ ರಾಘವನ್, “ ನನ್ನರಸಿ ರಾಧೆ “ ಖ್ಯಾತಿಯ ಆಭಿನವ್ ವಿಶ್ವನಾಥನ್ ಮತ್ತು  ಸಮಾಜ ಸೇವಕರಾದ  ಎಸ್.ಆರ್ ವೆಂಕಟೇಶ್ ಗೌಡ ಅವರು ಭಾಗವಹಿಸಿದ್ದರು.
ಪೆÇ್ರಫೆಸರ್ ಡಾ. ಎ.ವಿ. ಶ್ರೀನಿವಾಸನ್ ಅವರು ದೀಪ ಬೆಳಗಿಸುವ ಮೂಲಕ ಗ್ರೇಸ್ ಅಂಡ್ ಗ್ಲೋ ಸೆಂಟರ್ ಅನ್ನು ಲೋಕಾರ್ಪಣೆ ಮಾಡಿದರು.  ಬಳಿಕ ಮಾತನಾಡಿದ ಎ.ವಿ.ಶ್ರೀನಿವಾಸನ್, ಎಲ್ಲರಿಗೂ ಒಂದು ಒಳ್ಳೆಯ ಆರೋಗ್ಯ ಸಿಗಬೇಕು. ಮಂಡಿ ನೋವು, ಬೆನ್ನು ನೋವು ಅಂತ ಬಂದಾಗ ದುಬಾರಿ ವೆಚ್ಚದಲ್ಲಿ ಕೂಡಿದ ಚಿಕಿತ್ಸೆ ಇರುತ್ತದೆ. ಆದ್ರೂ ಕೂಡ ಶಾಶ್ವತ ಪರಿಹಾರ ಸಿಗೋದಿಲ್ಲ. ಆದ್ರೆ ನಮ್ಮಲ್ಲಿ ಹತ್ತು ದಿನಗಳಲ್ಲಿ ಶಾಶ್ವತ ಪರಿಹಾರವನ್ನು ದೊರಕಿಸಿಕೊಡುತ್ತೇವೆ. ಮುಂದೆ ಲೈಫ್ ಸ್ಟ್ರೈಲ್ ಹೇಗಿರಬೇಕು ಅನ್ನೋದನ್ನ ಕೂಡ ನಾವು ತಿಳಿಸುತ್ತೇವೆ. ಜೊತೆಗೆ ಡಯಟ್ ಚಾಟ್ ಕೂಡ ಕೊಡುತ್ತೇವೆ ಎಂದು ಮಾಹಿತಿ ನೀಡಿದರು.
ಪ್ರೊಫೆಸರ್ ಡಾ. ಎ.ವಿ. ಶ್ರೀನಿವಾಸನ್ ಫಿಲಾಸಫಿ, ಮರ್ಮ ಚಿಕಿತ್ಸಾ ಮತ್ತು ಇಂಟಿಗ್ರೇಟೇಡ್ ಮೆಡಿಸಿನ್ ನಲ್ಲಿ ಅಪಾರ ಪಾಂಡಿತ್ಯ ಮತ್ತು ಅನುಭವ ಹೊಂದಿದ್ದು, ಡಿ.ಲಿಟ್ ಪದವಿಯನ್ನು ಅಮೇರಿಕಾದ ಕಿಂಗ್ಸ್ ಯುನಿವರ್ಸಿಟಿ ಯಿಂದ ಪಡೆದಿದ್ದಾರೆ. ಹಲವಾರು ವರ್ಷಗಳಿಂದ ಪೆÇ್ರಫೆಸರ್ ಹಾಗೂ ಡಾಕ್ಟರ್ ಆಗಿ ಸಮಗ್ರ ಔಷಧಿ, ಥೆರಾಪ್ಯೂಟಿಕ್ ಲಂಬರ್ ಸ್ಪಾಂಡಿಲೊಸಿಸ್, ಸಿಯಾಟಿಕಾ,ಅಥೆರೊಸೆಲೊರೊಸಿಸ್ ಮತ್ತು ಪಾಶ್ರ್ವವಾಯು ಮುಂತಾದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುತ್ತಾರೆ. ಹಾಗೇ ಪ್ರೊಫೆಸರ್ ಡಾ. ಎ. ವಿ. ಶ್ರೀನಿವಾಸನ್ ಸಮಾಜಮುಖಿ ಸೇವೆಗಳಲ್ಲೂ ಮುಂದು.
ಬಳಿಕ ಮಾತನಾಡಿದ ಬಿಬಿಎಂಪಿ ಮಾಜಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ನಟಿ ರಂಜನಿ ರಾಘವನ್, ನಟ ಅಭಿನವ್ ವಿಶ್ವನಾಥನ್, ಎಸ್.ಆರ್ ವೆಂಕಟೇಶ್ ಗೌಡ ಸಂಸ್ಥೆಗೆ ಶುಭ ಕೋರಿದರು.
ಈ ಸೆಂಟರ್ ನಲ್ಲಿ ದೊರೆಯುವ ಪರಿಣಾಮಕಾರಿ ಚಿಕಿತ್ಸೆಗಳು:
ಕಾಸ್ಮೆಟಾಲಜಿ, ಆಯುರ್ವೇದ ಪಂಚಕರ್ಮ, ಮರ್ಮಚಿಕಿತ್ಸೆ .
ಕಾಸ್ಮೆಟಾಲಜಿ, ಆಯುವೇದ, ಪಂಚಕರ್ಮ ಹಾಗೂ ವರ್ಮಾಲಜಿ (ಮರ್ಮ ಕಲೆ) ಚಿಕಿತ್ಸೆಯನ್ನು ಪ್ರಾಚೀನ ವ್ಯೆದ್ಯ ಪದ್ಧತಿಗನುಗುಣವಾಗಿ ಜನರಿಗೆ ನೀಡುವ ಸಲುವಾಗಿ ಆರಂಭವಾದ ಗ್ರೇಸ್ & ಗ್ಲೋ ವಿಭಿನ್ನ ಚಿಕಿತ್ಸಾ ವಿಧಾನಗಳಿಂದ ಸಾರ್ವಜನಿಕರನ್ನ ತನ್ನತ್ತ ಸೆಳೆಯುವುದರಲ್ಲಿ ಸಂಶಯವಿಲ್ಲ. ಪುರಾಣಕಾಲದಿಂದ ಪ್ರಚಲಿತದಲ್ಲಿದ್ದು ಶಸ್ತ್ರಚಿಕಿತ್ಸೆಯಿಲ್ಲದೆ ಮಾರಣಾಂತಿಕ ಖಾಯಿಲೆಗಳನ್ನ ಗುಣಪಡಿಸಬಹುದಾದ ಸರಳ ಅತ್ಯುತ್ತಮ ಚಿಕಿತ್ಸೆ ವರ್ಮಾಲಜಿ, ನೈಸರ್ಗಿಕ ವಿಧಾನಗಳಿಂದ ಮಾನಸಿಕ ಮತ್ತು ದೈಹಿಕ ಸಮಸ್ಯೆಗಳನ್ನ ಗುಣಪಡಿಸುವ ಆಯುವೇದ, ಪಂಚಕರ್ಮ ಪದ್ಧತಿ ರೋಗಿಯನ್ನ ನಿರೋಗಿಯಾಗಿಸುವ ಪರಿಣಾಮಕಾರಿ ಚಿಕಿತ್ಸೆ. ಇದೆಲ್ಲವೂ ಗ್ರೇಸ್ & ಗ್ಲೋ ಸೆಂಟರ್ನಲ್ಲಿ ದೊರೆಯಲಿದ್ದು ಆರೋಗ್ಯಕ್ಕೆ ಪೂರಕವಾದ ನಿಸರ್ಗದತ್ತ ಚಿಕಿತ್ಸೆಗಳನ್ನು ಮಾತ್ರ ನೀಡಲಾಗುವುದು.
ನೈಸರ್ಗಿಕವಾಗಿ ಮುಖದ ಮೇಲಿನ ಹಲವಾರು ಚರ್ಮ ಸಂಬಂಧಿತ ಸಮಸ್ಯೆಗಳನ್ನು, ಅನವಶ್ಯಕ ಕೂದಲು ಬೆಳೆಯುವುದನ್ನ ನಿಯಂತಿಸುವ ಶಾಶ್ವತ ಚಿಕಿತ್ಸಾಕ್ರಮಗಳನ್ನ ಇಲ್ಲಿ ನೋಡಬಹುದು.
ಕೂದಲ ಬೆಳವಣಿಗೆಗಾಗಿ ಹೇರ್ ರಿವೈವಲ್ ಥೆರಪಿ ಮತ್ತು ಪಿ. ಆರ್.ಪಿ ಹೇರ್ ರೆಸ್ಟೋರೇಷನ್ ಟ್ರೀಟ್ಮೇಂಟ್ ಇಲ್ಲಿ ದೊರಕುತ್ತದೆ.
ಮುಖದ ತಾಜಾ ಕಾಂತಿಗಾಗಿ ಅಲ್ಟ್ರಾ ಗ್ಲೋ ಹೈಡ್ರಾ ಥೆರಪಿ, ಪಿಗ್ಮೆಂಟೇಷನ್ ಕಡಿಮೆಗೊಳಿಸಲು, ಟ್ಯಾಟೂ ರಿಮೂವಲ್ ಮಾಡಲು ಲೇಸರ್ ಟೋನಿಂಗ್ ಇಲ್ಲಿ ಲಭ್ಯವಿದೆ. ಮುಖದ ಮೇಲಿನ ಮೊಡವೆ, ಕಲೆ ಇನ್ನಿತರ ಸಮಸ್ಯೆಗಳಿಗೆ ಸೆರಮ್ ಥೆರಪೀಸ್ ಮತ್ತು ಪೀಲ್ಸ್ ವಿಧಾನಗಳು ಪರಿಣಾಮಕಾರಿ ಬೆಳವಣಿಗೆಯನ್ನ ಗ್ರಾಹಕರಿಗೆ ನೀಡಲಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ