ಆನ್ ಲೈನ್ ನಲ್ಲೇ ಆಧಾರ್ ವಿಳಾಸ ಬದಲಾಯಿಸುವುದು ಹೇಗೆ ಇಲ್ಲಿದೆ ಮಾಹಿತಿ

Krishnaveni K

ಮಂಗಳವಾರ, 10 ಸೆಪ್ಟಂಬರ್ 2024 (08:58 IST)
ಬೆಂಗಳೂರು: ಸರ್ಕಾರದ ಕೆಲವೊಂದು ಯೋಜನೆಗಳನ್ನು ಈಗ ಆನ್ ಲೈನ್ ನಲ್ಲೇ ಪಡೆಯಬಹುದಾಗಿದೆ. ಅದೇ ರೀತಿ ಆಧಾರ್ ವಿಳಾಸವನ್ನೂ ಈಗ ಸುಲಭವಾಗಿ ಆನ್ ಲೈನ್ ನಲ್ಲೇ ಬದಲಾಯಿಸಬಹುದಾಗಿದೆ. ಅದು ಹೇಗೆ ಎಂದು ವಿವರ ಇಲ್ಲಿದೆ.

ಆಧಾರ್ ಕಾರ್ಡ್ ಎನ್ನುವುದು ಈಗ ಪ್ರತಿಯೊಂದು ವಿಚಾರಕ್ಕೂ ಅಗತ್ಯವಾಗಿ ಬೇಕಾಗುವ ದಾಖಲೆಯಾಗಿದೆ. ಕೆಲವೊಮ್ಮೆ ನಮ್ಮ ಮನೆ ಬದಲಾವಣೆ ಮಾಡಿದಾಗ ಅಥವಾ ಮಹಿಳೆಯರು ಮದುವೆಯ ಬಳಿಕ ಅನಿವಾರ್ಯವಾಗಿ ತಮ್ಮ ಆಧಾರ್ ವಿಳಾಸವನ್ನು ಬದಲಾಯಿಸಬೇಕಾಗುತ್ತದೆ. ಆಧಾರ್ ವಿಳಾಸ ಬದಲಾವಣೆ ಈಗ ನಿಮ್ಮ ಮನೆಯಲ್ಲಿಯೇ ಕುಳಿತು ಆನ್ ಲೈನ್ ನಲ್ಲೇ ಮಾಡಬಹುದಾಗಿದೆ.

ಆಧಾರ್ ವಿಳಾಸ ಬದಲಾಯಿಸಲು ಏನು ಮಾಡಬೇಕು ಇಲ್ಲಿ ಹಂತ ಹಂತವಾಗಿ ವಿವರ ನೀಡಲಾಗಿದೆ:
ಹಂತ 1: ಮೈಆಧಾರ್ ಪೋರ್ಟಲ್ ಗೆ ಲಾಗಿನ್ ಆಗಿ
ಹಂತ2: ಈಗ ನಿಮ್ಮ ಅಲ್ಲಿ ನಿಮ್ಮ ಆಧಾರ್ ನಂಬರ್ ಮತ್ತು ಕೋಡ್ ನಮೂದಿಸಿ ಒಟಿಪಿ ಪಡೆಯಿರಿ
ಹಂತ 3: ಮುಂದಿನ ಹಂತದಲ್ಲಿ ಅಪ್ ಡೇಟ್ ಆಧಾರ್ ಎಂಬ ಬಟನ್ ಕ್ಲಿಕ್ ಮಾಡಿ
ಹಂತ 4: ಅಲ್ಲಿರುವ ನಿಯಮಾವಳಿಗಳನ್ನು ಓದಿ ಪ್ರೊಸೀಡ್ ಟು ಆಧಾರ್ ಅಪ್ ಡೇಟ್ ಬಟನ್ ಕ್ಲಿಕ್ ಮಾಡಿ
ಹಂತ 5: ಅಡ್ರೆಸ್ ಬಟನ್ ಆಯ್ಕೆ ಮಾಡಿ ಪ್ರೊಸೀಡ್ ಟು ಆಧಾರ್ ಅಪ್ ಡೇಟ್ ಬಟನ್ ಕ್ಲಿಕ್ ಮಾಡಿ
ಹಂತ 6: ಆನ್ ಲೈನ್ ಫಾರ್ಮ್ ನಲ್ಲಿ ಈಗಿನ ವಿಳಾಸ ಕಂಡುಬರುತ್ತದೆ, ಕೆಳಗೆ ಸ್ಕ್ರಾಲ್ ಮಾಡಿ c/o ವಿಳಾಸ, ಹೊಸ ಅಡ್ರೆಸ್ ನಮೂದಿಸಿ, ಪೋಸ್ಟ್ ಆಫೀಸ್, ವ್ಯಾಲೀಡ್ ಸಪೋರ್ಟಿಂಗ್ ಡಾಕ್ಯುಮೆಂಟ್ ಟೈಪ್ ನಲ್ಲಿ ವಿಳಾಸ ದಾಖಲಾತಿ ಆಯ್ಕೆ ಮಾಡಿ  ಮತ್ತು ನೆಕ್ಸ್ಟ್ ಬಟನ್ ಕ್ಲಿಕ್ ಮಾಡಿ.
ಹಂತ 7: ವಿವರಗಳನ್ನು ಪುನರ್ ಪರಿಶೀಲಿಸಿ 50 ರೂ.ಗಳ ಶುಲ್ಕ ಪಾವತಿಸಿ.
ಈಗ ಒಂದು ಸರ್ವಿಸ್ ರಿಕ್ವೆಸ್ಟ್ ನಂಬರ್ (ಎಸ್ಆರ್ ಎನ್) ಜನರೇಟ್ ಆಗುತ್ತದೆ. ಇದನ್ನು ಸೇವ್ ಮಾಡಿಕೊಂಡು ನಂತರ ನಿಮ್ಮ ಆಧಾರ್ ಸ್ಥಿತಿಗತಿ ತಿಳಿಯಲು ಬಳಸಿಕೊಳ್ಳಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ