ಬೆಂಗಳೂರು: ನಾಳೆ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಸಂಭ್ರಮವಾಗಿದ್ದು, ಪ್ರಧಾನಿ ಮೋದಿ ಈಗಾಗಲೇ ದೇಶದ ಜನತೆಗೆ ಪ್ರತಿವರ್ಷದಂತೆ ಹರ್ ಘರ್ ತಿರಂಗಾ ಅಭಿಯಾನದಲ್ಲಿ ಭಾಗಿಯಾಗಲು ಕರೆ ನೀಡಿದ್ದಾರೆ.
ಹರ್ ಘರ್ ತಿರಂಗಾ ಯೋಜನೆ ಎಂದರೇನು?
ಸ್ವಾತಂತ್ರ್ಯೋತ್ಸವ ಎನ್ನುವುದು ಧರ್ಮ ಬೇಧವಿಲ್ಲದೇ ಆಚರಿಸಲಾಗುವ ರಾಷ್ಟ್ರೀಯ ಹಬ್ಬ. ಹೀಗಾಗಿ ದೇಶದ ಪ್ರತಿಯೊಬ್ಬ ನಾಗಕರಿಕನೂ ಈ ದೇಶದ ಹಬ್ಬದಲ್ಲಿ ಭಾಗಿಯಾಗಬೇಕು ಎನ್ನುವ ಉದ್ದೇಶದಿಂದ ಮೋದಿ ಸರ್ಕಾರ ಹರ್ ಘರ್ ತಿರಂಗಾ ಅಭಿಯಾನವನ್ನು ಜಾರಿಗೆ ತಂದಿದೆ. ಅದರಂತೆ ಸ್ವಾತಂತ್ರ್ಯೋತ್ಸವದ ಸಂಭ್ರಮದ ಕ್ಷಣದಲ್ಲಿ ನಿಮ್ಮ ಮನೆಯ ಮುಂದೆ ಧ್ವಜಾರೋಹಣ ಮಾಡಿ ಗೌರವ ಸಲ್ಲಿಸಬಹುದಾಗಿದೆ.
ಇದನ್ನು ಪ್ರೋತ್ಸಾಹಿಸುವ ನಿಟ್ಟಿನಿಂದ ಮೋದಿ ಸರ್ಕಾರ ಹರ್ ಘರ್ ತಿರಂಗಾ ಸರ್ಟಿಫಿಕೇಟ್ ನ್ನೂ ನೀಡುತ್ತಿದೆ. ಇದಕ್ಕಾಗಿ ನೀವು ಮಾಡಬೇಕಾಗಿರುವುದು ಸಿಂಪಲ್ ಕೆಲಸ. ಏನು ಮಾಡಬೇಕು ಎಂದು ಇಲ್ಲಿ ನೋಡಿ.
ಹರ್ ಘರ್ ತಿರಂಗಾ ಸರ್ಟಿಫಿಕೇಟ್ ಪಡೆಯುವುದು ಹೇಗೆ?
https://harghartiranga.com/ ಎಂಬ Website ಗೆ ತೆರಳಿ Upload Selfie ಎಂಬ ಬಟನ್ ಕ್ಲಿಕ್ ಮಾಡಿ. ಅಲ್ಲಿ ನಿಮ್ಮ ಹೆಸರು, ಮೊಬೈಲ್ ಸಂಖ್ಯೆ, ದೇಶ/ರಾಜ್ಯ ವಿವರಗಳನ್ನು ನೀಡಿ ತಿರಂಗಾ ಜೊತೆಗೆ ನೀವು ತೆಗೆದುಕೊಂಡ ಸೆಲ್ಫೀಯನ್ನು ಅಪ್ ಲೋಡ್ ಮಾಡಿ ಕ್ಲಿಕ್ ಕೊಡಿ. ಬಳಿಕ ಜನರೇಟ್ ಸರ್ಟಿಫಿಕೇಟ್ ಆಯ್ಕೆ ಕ್ಲಿಕ್ ಮಾಡಿ ನಿಮ್ಮ ಸರ್ಟಿಫಿಕೇಟ್ ನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು. ಕಳೆದ ವರ್ಷ ಈ ಅಭಿಯಾನದಲ್ಲಿ 23 ಕೋಟಿ ಕುಟುಂಬದವರು ತಮ್ಮ ಮನೆ ಮುಂದೆ ಧ್ವಜಾರೋಹಣ ಮಾಡಿದ ಫೋಟೋಗಳನ್ನು ಹಂಚಿಕೊಂಡಿದ್ದರು.