ಮೊಬೈಲ್ ಕಾಲರ್‌ ಟ್ಯೂನ್‌ನಲ್ಲೂ ಮೊಳಗುತ್ತಿದೆ 'ಹರ್ ಘರ್ ತಿರಂಗಾ'

Sampriya

ಮಂಗಳವಾರ, 13 ಆಗಸ್ಟ್ 2024 (20:26 IST)
Photo Courtesy X
ಬೆಂಗಳೂರು: ದೇಶದಾದ್ಯಂತ ಇದೇ 15ರಂದು 78 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ಅದ್ಧೂರಿ ತಯಾರಿ ನಡೆಸಲಾಗುತ್ತಿದೆ. ತ್ರಿವರ್ಣ ಧ್ವಜವನ್ನು ಹಾರಿಸಲು ಜನರಿಗೆ ಹೆಚ್ಚಿನ ಉತ್ತೇಜನ ನೀಡುವ ಸಲುವಾಗಿ 'ಹರ್ ಘರ್ ತಿರಂಗಾ' ಅಭಿಯಾನವನ್ನು ಶುರು ಮಾಡಲಾಗಿದೆ. ಇದೀಗ ಎಲ್ಲಡೆಯೂ ತ್ರಿವರ್ಣ ಧ್ವಜ ರಾರಾಜಿಸುತ್ತಿದೆ. ಅದರಂತೆ ಮೊಬೈಲ್ ಕಾಲರ್‌ ಟ್ಯೂನ್‌ ಮೂಲಕ ಅಭಿಯಾನವನ್ನು ಶುರು ಮಾಡಲಾಗಿದೆ.

2024 ರ ಸ್ವಾತಂತ್ರ್ಯ ದಿನಾಚರಣೆಯ ಭಾಗವಾಗಿ ಪ್ರತಿ ಮನೆಯಲ್ಲೂ ಧ್ವಜಾರೋಹಣ ಮಾಡಲು ನಾಗರಿಕರನ್ನು ಪ್ರೋತ್ಸಾಹಿಸುವ ಸಲುವಾಗಿ 'ಹರ್ ಘರ್ ತಿರಂಗ್' ಕಾಲರ್ ಟ್ಯೂನ್ ಅಭಿಯಾನ ಶುರು ಮಾಡಲಾಗಿದೆ.

ಇದೀಗ ಕರೆ ಮಾಡಿದಾಗ ಮೋದಿ ಧ್ವನಿಯಲ್ಲಿ 'ಹರ್‌ ಘರ್ ತಿರಂಗ್' ಎಂಬ ರಿಂಗ್‌ ಟೋನ್ ಕೇಳಿಸುತ್ತಿದೆ.  78ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಈ ವರ್ಷದ ಆಗಸ್ಟ್ 9 ರಿಂದ 15 ರವರೆಗೆ ಅಭಿಯಾನದ ಮೂರನೇ ಆವೃತ್ತಿಯನ್ನು ಆಚರಿಸಲಾಗುತ್ತಿದೆ. ಮಕ್ಕಳಿಗೆ ದೇಶದ ಬಗ್ಗೆ ಜಾಗೃತಿ ಮೂಡಿಸಲು ಶಾಲೆಗಳಲ್ಲಿ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಅಭಿಯಾನ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಪೋಸ್ಟ್ ಮಾಡಿ, "ಈ ವರ್ಷದ ಸ್ವಾತಂತ್ರ್ಯ ದಿನಾಚರಣೆ ಸಮೀಪಿಸುತ್ತಿರುವಂತೆ, ಮತ್ತೊಮ್ಮೆ #HarGharTiranga ಅನ್ನು ಸ್ಮರಣೀಯ ಸಾಮೂಹಿಕ ಆಂದೋಲನವನ್ನಾಗಿ ಮಾಡೋಣ. ನಾನು ನನ್ನ ಪ್ರೊಫೈಲ್ ಚಿತ್ರವನ್ನು ಬದಲಾಯಿಸುತ್ತಿದ್ದೇನೆ ಮತ್ತು ಅದೇ ರೀತಿ ಮಾಡುವ ಮೂಲಕ ನಮ್ಮ ತ್ರಿವರ್ಣ ಧ್ವಜವನ್ನು ಆಚರಿಸಲು ನನ್ನೊಂದಿಗೆ ಸೇರಲು ನಾನು ನಿಮ್ಮೆಲ್ಲರನ್ನು ಕೋರುತ್ತೇನೆ. ಹೌದು, ನಿಮ್ಮ ಸೆಲ್ಫಿಗಳನ್ನು ಹರ್ಘರ್ತಿರಂಗದಲ್ಲಿ ಹಂಚಿಕೊಳ್ಳಿ. .com," ಎಂದು ಬರೆದುಕೊಂಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ