ಶತಮಾನಗಳ ಹಿಂದಿನ ಬ್ರೈಟ್ ನೈಟ್ ರಹಸ್ಯ ಬೇಧಿಸಿದ ವಿಜ್ನಾನಿಗಳು

ಶನಿವಾರ, 24 ಜೂನ್ 2017 (20:19 IST)
ಕೆನಡಾ:ವಿಜ್ನಾನಿಗಳು ಶತಮಾನಗಳ ಕಾಲದ ಬ್ರೈಟ್ ನೈಟ್ಸ್ ಕುರಿತಾದ ರಹಸ್ಯವನ್ನು ಬೇಧಿಸಿದ್ದಾರೆ. ಗಾಢವಾದ ಕತ್ತಲು ಆವರಿಸಿದ ಬಳಿಕ ಪರ್ವತಗಳ ಮಧ್ಯೆ ಗೋಚರಿಸುವ ಅಸಾಮಾನ್ಯ ಹೊಳಪು, ಈ ಪ್ರಕಾಶಮಾನವಾದ ಬೆಳಕಿಗೆ ಕಾರಣವೇನು ಎಂಬುದನ್ನು ವಿಜ್ನಾನಿಗಳು ಕಂಡುಹಿಡಿದಿದ್ದಾರೆ.
 
ಮೇಲಿನ ವಾಯುಮಂಡಲದಲ್ಲಿನ ಅಲೆಗಳು ಭೂಮಿಯ ಮೇಲಿನ ನಿರ್ದಿಷ್ಟ ಸ್ಥಳಗಳ ಮೇಲೆ ಒಮ್ಮುಖವಾಗುವಾಗ, ನೈಸರ್ಗಿಕವಾಗಿ ಉಂಟಾಗುವ ಏರ್ ಗ್ಲೋ ಅನ್ನು ಹೆಚ್ಚಿಸುತ್ತದೆ, ವಾತಾವರಣದಲ್ಲಿ ಆಮ್ಲಜನಕದ ಪರಮಾಣುಗಳ ಚಟುವಟಿಕೆಗಳು ಹೆಚ್ಚಾಗಿ ಸಾಮಾನ್ಯವಾಗಿ ಹಸಿರು ಕಾಣುವ ಬೆಳಕು ರಾತ್ರಿ ಆಕಾಶದಲ್ಲಿ ಮಸುಕಾದ ಬೆಳಕನ್ನು ವರ್ಧಿಸುತ್ತದೆ ಈ ಬೆಳಕೆ ಬ್ರೈಟ್ ನೈಟ್ ಆಗಿ ಕಾಣುತ್ತದೆ ಎಂದು ಸಂಶೋಧಕರು ಹೇಳುತ್ತಾರೆ. ಈ ಬ್ರೈಟ್ ನೈಟ್ಸ್ ನ್ನು ಬರಿಗಣ್ಣಿನಿಂದಲೂ ನೋಡಬಹುದಾಗಿದೆ. ಆದರೆ ಸಾಮಾನ್ಯ ಜನರು ಇದನ್ನು ಹೆಚ್ಚಾಗಿ ಗಮನಿಸುವುದಿಲ್ಲ.
 
ಬ್ರೈಟ್ ನೈಟ್ಸ್ ಬಗ್ಗೆ ಈ ಹಿಂದೆಯೂ ಉಲ್ಲೇಖಿಸಲಾಗಿದ್ದು,ಇದನ್ನು ಉಪಗ್ರಹ ಸಾಧನಗಳ ಮೂಲಕ ವೀಕ್ಷಿಸಬಹುದಾದ ಗಾಳಿಗೋಳದ ವ್ಯತ್ಯಾಸದ ಭಾಗವಾಗಿದೆ ಎಂದು ಕೆನಡಾದ ಟೊರೊಂಟೋದಲ್ಲಿನ ಯಾರ್ಕ್ ವಿಶ್ವವಿದ್ಯಾನಿಲಯದ ವಿಜ್ನಾನಿ ಗಾರ್ಡನ್ ಶೆಫರ್ಡ್ ಹೇಳುತ್ತಾರೆ. ಈ ಹಿಂದೆ ಬ್ರೈಟ್ ನೈಟ್ ಕುರಿತಾಗಿ ನಾಸಾದ ಸ್ಯಾಟಲೈಟ್ ಕೂಡ ಸಂಶೋಧನೆಯನ್ನು ಮಾಡಿತ್ತು. ಆದರೆ ಈ ಬಗ್ಗೆ ಸಾಕಷ್ಟು ಗೊಂದಲಗಳು ಇದ್ದವು.
 
ಆದರೀಗ ಅಂತಿಮವಾಗಿ ಆಧುನಿಕ ವಿಜ್ನಾನಿಗಳು ಈ ಕುರಿತು ವಿವರಣೆಗಳನ್ನು ನೀಡಿದ್ದು, ವಾಯುಮಂಡಲದಲ್ಲಿನ ಅಲೆಗಳು ಭೂಮಿಯ ಮೇಲಿನ ನಿರ್ದಿಷ್ಟ ಸ್ಥಳಗಳ ಮೇಲೆ ಒಮ್ಮುಖವಾಗುವಾಗ, ಉಂಟಾಗುವ ಏರ್ ಗ್ಲೋ ಅನ್ನು ಹೆಚ್ಚಿಸುತ್ತದೆ, ವಾತಾವರಣದಲ್ಲಿ ಆಮ್ಲಜನಕದ ಚಟುವಟಿಕೆ ಹೆಚ್ಚಾಗಿ ಬೆಳಕನ್ನು ವರ್ಧಿಸುತ್ತದೆ. ಇದೇ ಬ್ರೈಟ್ ನೈಟ್ ಆಗಿದೆ ಎಂಬುದನ್ನು ಪ್ರತಿಪಾದಿಸಿದ್ದಾರೆ.
 
 
 

ವೆಬ್ದುನಿಯಾವನ್ನು ಓದಿ