Christmas: ಕ್ರಿಸ್ ಮಸ್ ಸಂದರ್ಭದಲ್ಲಿ ಕೆರೋಲ್ಸ್ ಹಾಡುವುದು ಯಾಕೆ

Krishnaveni K

ಬುಧವಾರ, 25 ಡಿಸೆಂಬರ್ 2024 (09:12 IST)
ಬೆಂಗಳೂರು: ಇಂದು ಕ್ರೈಸ್ತ ಧರ್ಮೀಯರು ತಮ್ಮ ಆರಾದ್ಯ ದೈವ ಯೇಸು ಕ್ರಿಸ್ತನ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ. ಕ್ರಿಸ್ ಮಸ್ ಹಬ್ಬಕ್ಕೆ ಕೆರೋಲ್ಸ್ ಹಾಡುಗಳನ್ನು ಹಾಡುವುದು ವಾಡಿಕೆ.

ಕ್ರಿಸ್ ಮಸ್ ಹಬ್ಬದಂದು ಯೇಸು ಕ್ರಿಸ್ತನು ಈ ಭೂಮಿಗೆ ಬಂದ ದಿನವನ್ನಾಗಿ ಕ್ರೈಸ್ತ ಧರ್ಮೀಯರು ಆಚರಿಸುತ್ತಾರೆ. ಡಿಸೆಂಬರ್ 24 ರ ಮಧ್ಯರಾತ್ರಿಯಿಂದಲೇ ಕ್ರಿಸ್ ಮಸ್ ಆಚರಣೆ ಶುರುವಾಗುತ್ತದೆ. ಯಾಕೆಂದರೆ ಯೇಸು ಕ್ರಿಸ್ತನು ಮಧ್ಯರಾತ್ರಿಯೇ ದನದ ಕೊಟ್ಟಿಗೆಯಲ್ಲಿ ಜನಿಸಿದನು ಎಂಬುದು ಕ್ರೈಸ್ತರ ನಂಬಿಕೆ

ಎರಡೂವರೆ ಸಾವಿರ ವರ್ಷಗಳ ಹಿಂದೆ ಕ್ರೈಸ್ತಹುಟ್ಟಿದ್ದ ಎಂದು ನಂಬಲಾಗಿದೆ. ಜನರ ಉದ್ದಾರಕ್ಕಾಗಿಯೇ ಆತ ಬದುಕಿದ್ದ. ಜನರಿಗಾಗಿಯೇ ಶಿಲುಬೆಗೆ ಏರುವ ಮೂಲಕ ಪ್ರಾಣ ತ್ಯಾಗ ಮಾಡಿದ ಎಂಬುದು ನಂಬಿಕೆ. ಯೇಸುವಿನ ಜನನವನ್ನು ಸಂಭ್ರಮಿಸುವ ಸಲುವಾಗಿಯೇ ಉಡುಗೊರೆ, ಕೇಕ್, ಹಾಡುಗಳ ಮೂಲಕ ಹಬ್ಬ ಆಚರಿಸಲಾಗುತ್ತದೆ.

ಅದರಲ್ಲೂ ವಿಶೇಷವಾಗಿ ಕೆರೋಲ್ಸ್ ಹಾಡುವುದು ವಾಡಿಕೆ. ಇದು ಸಾಂಪ್ರದಾಯಿಕ ಇಂಗ್ಲಿಷ್ ಹಾಡುಗಳಾಗಿದ್ದು, ಕ್ರಿಸ್ತನ ಜನನವನ್ನು ಸಂಭ್ರಮಿಸುವ ಹಾಡಾಗಿದೆ. ಕೆರೋಲ್ ಎಂಬುದ ಫ್ರೆಂಚ್ ಶಬ್ಧವಾಗಿದ್ದು, ಸಂಭ್ರಮಿಸುವುದು ಎಂದು ಇದರ ಅರ್ಥವಾಗಿದೆ. ಕ್ರಿಸ್ ಮಸ್ ಹಬ್ಬದ ಸಂದರ್ಭದಲ್ಲಿ ಮನೆಯವರೆಲ್ಲಾ ಒಟ್ಟಾಗಿ ಕೆರೋಲ್ಸ್ ಹಾಡುಗಳನ್ನು ಹಾಡಿ ನೃತ್ಯ ಮಾಡಿ ಸಂಭ್ರಮಾಚರಣೆ ಮಾಡುವುದು ಪದ್ಧತಿಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ