ಸೋಲಿನ ಭೀತಿಯಿಂದ ಮೈತ್ರಿ ನಾಯಕರು ಅಕ್ರಮ ಹಾದಿ ಹಿಡಿದಿದ್ದಾರೆ ಎಂದ ಕೇಂದ್ರ ಸಚಿವ

ಶುಕ್ರವಾರ, 5 ಏಪ್ರಿಲ್ 2019 (18:58 IST)
ಮೈತ್ರಿ ನಾಯಕರು ಸೋಲಿನ ಭೀತಿಯಿಂದ ಅಕ್ರಮ ಹಾದಿಗಳನ್ನು ಹಿಡಿದಿದ್ದಾರೆ. ರಾಜ್ಯದಲ್ಲಿ ಭಯ ಮುಕ್ತವಾಗಿ ಮತ್ತು ಪಾರದರ್ಶಕವಾಗಿ ಚುನಾವಣೆ ನಡೆಯೋದು ಸಂಶಯ ಮೂಡುತ್ತಿದೆ. ಹೀಗಂತ ಕೇಂದ್ರ ಸಚಿವರೊಬ್ಬರು ಅನುಮಾನ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸಚಿವ ಡಿ.ವ್ಹಿ.ಸದಾನಂದಗೌಡ ಹೇಳಿಕೆ ನೀಡಿದ್ದು, ಕೆ.ಆರ್.ಪುರಂ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಇಂತಹ ಘಟನೆಗಳು ನಡೆಯುತ್ತಿವೆ. ಪಾಲಿಕೆ ನಾಮನಿರ್ದೇಶನ ಸದಸ್ಯ ಅಮಾನುಲ್ಲಾಖಾನ್ ಮತ್ತು ಹಲವು ಕಾಂಗ್ರೆಸ್ ನಾಯಕರು ಸಭೆ ನಡೆಸಿ ಬಿಜೆಪಿ ನಾಯಕರ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ‌. ಬಿಜೆಪಿ ಯಾವುದೇ ಬೆದರಿಕೆ ಜಗ್ಗಲ್ಲ ಕಾನೂನಿಗೆ ತಲೆಬಾಗುತ್ತೇವೆ ಎಂದರು.

ಈ ಬಗ್ಗೆ ವೈರಲ್ ಆದ ವಿಡಿಯೋ ಮತ್ತು ಆಡಿಯೋ ಚುನಾವಣೆ ಆಯೋಗಕ್ಕೆ ನೀಡಿದ್ದೇವೆ. ಗೂಂಡಾ ಪ್ರವೃತ್ತಿಯುಳ್ಳ ನಾಯಕರನ್ನ ಚುನಾವಣೆ ಮುಗಿಯುವರೆಗೂ ಕ್ಷೇತ್ರದಿಂದ ದೂರವಿಡಲು ಮನವಿ ಮಾಡಿಕೊಂಡಿದ್ದೇವೆ. ಎರಡ್ಮೂರು ದಿನ ಕಾದು ನೋಡುತ್ತೇವೆ. ಸೂಕ್ತ ಕ್ರಮ ಆಗದೇ ಇದ್ದರೇ ನಾವು ಮುಂದಿನ ನಡೆ ತಗೆದುಕೊಳ್ಳುತ್ತೇವೆ ಎಂದರು.

ಚುನಾವಣೆ ಆಯೋಗ ಕ್ರಮ ಕೈಗೊಳ್ಳದೇ ಇದ್ರೆ ನಮ್ಮ ನಿರ್ಧಾರ ತಗೆದುಕೊಳ್ತೇವೆ ಎಂದರು.

ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ ಡಿವ್ಹಿಎಸ್ ಬಗ್ಗೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯರನ್ನ ಚಾಮುಂಡೇಶ್ವರಿಯಿಂದ ಓಡಿಸಿದ್ದಾರೆ‌. ನನ್ನ ಸಾಧನೆ ಬಗ್ಗೆ ಮಾಹಿತಿ ನೀಡಲು ಸಿದ್ದರಾಮಯ್ಯಗೆ ವಿಳಾಸ ಕೇಳಿದ್ದೆ. ಆದ್ರೆ ಸಿದ್ದರಾಮಯ್ಯಗೆ ಸೂಕ್ತ ವಿಳಾಸ ಇಲ್ಲ‌. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ವಿಳಾಸ ಇಲ್ಲ. ಸರ್ಕಾರದಲ್ಲಿ ಪ್ರಮುಖ ಜವಾಬ್ದಾರಿ ಇಲ್ಲ. ಬಾದಾಮಿಯಲ್ಲಿ ಮನೆ ಕೊಡಲ್ಲ ಅಂತ ಸ್ಥಳೀಯರು ಹೇಳಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಗೂಟದ ಕಾರಿಗೋಸ್ಕರ್ ಸಿದ್ದರಾಮಯ್ಯ ಮಾನಸಿಕ ಸ್ಥಿತಿ ಕಳೆದುಕೊಂಡು ಹೀಗೆ ಮಾತನಾಡ್ತಿದ್ದಾರೆ ಅಂತ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ್ದಾರೆ ಡಿವ್ಹಿಎಸ್.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ