ರಾತ್ರಿಯಾದ್ರೆ ದೈಹಿಕ ದಾಹಕ್ಕಾಗಿ ನಾಯಿಯಂತೆ ಬರುತ್ತಿಯಲ್ಲ ಆವಾಗ ಹೇಳ್ತೇನೆ?

ಶನಿವಾರ, 30 ಮಾರ್ಚ್ 2019 (16:53 IST)
ಪ್ರಶ್ನೆ: ನನ್ನ ಪತಿ ಪ್ರತಿನಿತ್ಯ ನನ್ನೊಂದಿಗೆ ಜಗಳವಾಡುತ್ತಾನೆ. ಸದಾ ಕಾಲ ಟಾರ್ಚರ್ ಮಾಡುತ್ತಿರುತ್ತಾನೆ. ಆದರೆ, ರಾತ್ರಿಯಾಗುತ್ತಿದ್ದಂತೆ ಆತನ ವರ್ತನೆ ಬದಲಾಗುತ್ತಿದೆ. ಲೈಂಗಿಕ ಕ್ರಿಯೆಗಾಗಿ ನನ್ನ ಬಳಿ ಬಂದು ನಾಯಿಯ ಹಾಗೇ ಕಾಲುಹಿಡಿದು ಗೋಗೆರೆಯುತ್ತಾನೆ. ತನ್ನ ದಾಹ ತೀರಿದ ನಂತರ ಗಡದ್ದಾಗಿ ನಿದ್ರೆಗೆ ಶರಣಾಗುತ್ತಾನೆ. ಮತ್ತೆ ಬೆಳಿಗ್ಗೆಯಾದರೇ ಆದೇ ಕಾಟ.
 
ಪತಿಗೆ ಗುಣವನ್ನು ತಿದ್ದಿಕೊಳ್ಳುವಂತೆ ಹಲವಾರು ಬಾರಿ ತಿಳಿಸಿಹೇಳಿದ್ದರೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲ. ನಾಯಿಬಾಲ ಡೊಂಕು ಎನ್ನುವಂತೆ ಆತನ ವರ್ತನೆ. ರಾತ್ರಿ ನನ್ನ ಬಳಿ ಬಂದಾಗ ಪತಿಗೆ ಲೈಂಗಿಕ ಕ್ರಿಯೆಯಲ್ಲಿ ಸಹಕರಿಸಬಾರದು ಎಂದು ಕೊಳ್ಳುತ್ತೇನೆ. ಆದರೆ ನನಗೂ ಕೂಡಾ ಲೈಂಗಿಕ ಕ್ರಿಯೆ ಎಂದರೆ ತುಂಬಾ ಇಷ್ಟ. ಅದನ್ನು ಅದುಮಿಟ್ಟುಕೊಳ್ಳಲು ಆಗುತ್ತಿಲ್ಲ. ನಾನು ಮಾಡುತ್ತಿರುವುದು ಸರಿಯೇ?... 
ಉತ್ತರ: ನಮ್ಮೊಂದಿಗೆ ನಿಮ್ಮ ಸಮಸ್ಯೆಯನ್ನು ಹಂಚಿಕೊಂಡಿರುವುದಕ್ಕೆ ಧನ್ಯವಾದಗಳು. ಪ್ರಮುಖವಾದ ವಿಷಯವೆಂದರೆ ಯಾವ ವಿಷಯದಲ್ಲಿ ನಿಮ್ಮ ಪತಿ ಜಗಳವಾಡುತ್ತಾರೆ ಎನ್ನುವುದು ತಿಳಿಸಿಲ್ಲ. ಆದಷ್ಟು ಪತಿಗೆ ಇಷ್ಟವಾದ ರೀತಿಯಲ್ಲಿ ನಡೆದುಕೊಳ್ಳಿ. ನಿಮ್ಮಲ್ಲಿ ಯಾವ ವಿಷಯಕ್ಕೆ ಜಗಳವಾಗುತ್ತದೆ ಎನ್ನುವ ಬಗ್ಗೆ ಇಬ್ಬರು ಯೋಚಿಸಿ ಒಂದು ಪರಿಹಾರಕ್ಕೆ ಬನ್ನಿ
 
ಪತಿಗೆ ಲೈಂಗಿಕ ಸುಖ ಕೊಡುವುದಿಲ್ಲ ಎನ್ನುವುದು ಸರಿಯಲ್ಲ. ಇಬ್ಬರು ಲೈಂಗಿಕ ಕ್ರಿಯೆಯಲ್ಲಿ ತೊಡಗಿದಾಗ ಪರಸ್ಪರರ ಮೇಲೆ ಪ್ರೀತಿ ಹೆಚ್ಚಾಗಿ ಆಕರ್ಷಣೆ ಉಂಟಾಗುತ್ತದೆ. ಇದರಿಂದ ಕೌಟಂಬಿಕ ನೆಮ್ಮದಿ ಕಾಣಬಹುದಾಗಿದೆ. ಇಬ್ಬರು ಒಂದು ಕಡೆ ಕುಳಿತು ಮನಬಿಚ್ಚಿ ಮಾತನಾಡಿದಾಗ ಪರಿಹಾರ ದೊರೆಯಲಿದೆ. 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ