ಯಾವನೋ ಅವನು ಯಶ್? ರಾಕಿಂಗ್ ಸ್ಟಾರ್ ವಿರುದ್ಧ ಸಿಎಂ ಕುಮಾರಸ್ವಾಮಿ ಏಕವಚನದ ವಾಗ್ದಾಳಿ
ಚುನಾವಣಾ ರ್ಯಾಲಿಯಲ್ಲಿ ರಾಕಿಂಗ್ ಸ್ಟಾರ್ ಯಶ್ ವಿರುದ್ಧ ಏಕವಚನ ಪ್ರಯೋಗ ಮಾಡಿದ ಸಿಎಂ ಕುಮಾರಸ್ವಾಮಿ ‘ಯಾವನೋ ಅವನು ಯಶ್? ನಮ್ಮಂಥಾ ನಿರ್ಮಾಪಕರಿದ್ದರೇ ಇವರೆಲ್ಲಾ ನಟರಾಗೋದು. ನನಗೆ ನೋವಾಗಬಾರದೆಂದು ಇವರೆಲ್ಲಾ ಏನೇ ಹೇಳಿದರೂ ನಮ್ಮ ಕಾರ್ಯಕರ್ತರು ಸುಮ್ಮನಿದ್ದಾರೆ. ಹಾಗಂತ ಹೆಚ್ಚು ನಾಲಿಗೆ ಹರಿಯಬಿಡುವುದು ಬೇಡ’ ಎಂದು ಯಶ್ ವಿರುದ್ಧ ಗುಡುಗಿದ್ದಾರೆ.