ಆರ್.ಅಶೋಕ್ ಗೆ ಅಧಿಕಾರ ಬೇಕು, ರಾಜಕೀಯದಲ್ಲಿ ಬೆಳೆಯಬೇಕು ಅಂತ ಆಸೆ ಇದ್ದರೆ ನಮ್ಮ ಪಕ್ಷಕ್ಕೆ ಬರಲಿ-ಡಿಕೆಶಿ

ಮಂಗಳವಾರ, 9 ಏಪ್ರಿಲ್ 2019 (09:09 IST)
ಬಳ್ಳಾರಿ : ನಾನು ಹಾಗೂ ಸಿಎಂ ಕುಮಾರಸ್ವಾಮಿ ಹಾಗೂ ದೇವೆಗೌಡರ  ಜೊತೆಗೆ ಹೊಂದಾಣಿಕೆ ಮಾಡಿಕೊಂಡಿಲ್ಲ. ಆದರೆ ಸಚಿವ ಡಿ.ಕೆ.ಶಿವಕುಮಾರ್ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದ ಮಾಜಿ ಡಿಸಿಎಂ ಆರ್.ಅಶೋಕ್ ಹೇಳಿಕೆಗೆ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಹಗರಿಬೊಮ್ಮನಹಳ್ಳಿಯಲ್ಲಿ ಆರ್.ಅಶೋಕ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ಮಾಜಿ ಡಿಸಿಎಂ ಆರ್.ಅಶೋಕ್ ನಮ್ಮ ಬದ್ರರ್. ಅವರಿಗೆ ಅಧಿಕಾರ ಬೇಕು, ರಾಜಕೀಯದಲ್ಲಿ ಬೆಳೆಯಬೇಕು ಅಂತ ಆಸೆ ಇದ್ದರೆ ಕಾಂಗ್ರೆಸ್-ಜೆಡಿಎಸ್ ಸಿದ್ಧಾಂತಗಳನ್ನ ಒಪ್ಪಿಕೊಂಡು ನಮ್ಮ ಪಕ್ಷಕ್ಕೆ ಬರಲಿ. ಆಗ ನಾವೇ ಅಧಿಕಾರ ಕೊಡಿಸುತ್ತೇವೆ. ಇಲ್ಲವೇ ಬಿಜೆಪಿಯಲ್ಲಿ ಬೆಳೆಯುವುದಾದರೆ ಬೆಳೆಯಲಿ. ಅವರು ಎಲ್ಲೆ ಬೆಳೆದರೂ ನಮಗೆ ಸಂತೋಷ ಎಂದು ಹೇಳಿದ್ದಾರೆ.

 

ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಜೊತೆಗೆ ಹೊಂದಾಣಿಕೆ ರಾಜಕಾರಣಕ್ಕೆ ನಾನು ಒಪ್ಪಲಿಲ್ಲ. ಇದಕ್ಕೆ ಸಾಕ್ಷಿ ಬೇಕು ಎನ್ನುವುದಾದರೆ ಕಳೆದ ಚುನಾವಣೆಯಲ್ಲಿನ ಫೋಟೋಗಳನ್ನು ಒಮ್ಮೆ ಆರ್.ಅಶೋಕ್ ನೋಡಲಿ ಎಂದು ಸಚಿವ ಡಿ.ಕೆ.ಶಿವಕುಮಾರ್ ಟಾಂಗ್ ನೀಡಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ