ಸಸ್ಯಹಾರಿಗಳೇ ಎಚ್ಚರ ! ನೀವು ತಿನ್ನುವ ಈ ಆಹಾರ ಗಳನ್ನು ಮಾಂಸಹಾರದಿಂದ ತಯಾರಿಸಲಾಗಿದೆಯಂತೆ
ಸೋಮವಾರ, 8 ಏಪ್ರಿಲ್ 2019 (09:48 IST)
ಬೆಂಗಳೂರು : ಕೆಲವರು ಮಾಂಸಹಾರವನ್ನು ತ್ಯಜಿಸಿರುತ್ತಾರೆ. ಆದರೆ ಅವರು ಸಸ್ಯಹಾರ ಎಂದು ಸೇವಿಸುವ ಕೆಲವು ವಸ್ತುಗಳು ಮಾಂಸಹಾರದಿಂದ ತಯಾರಿಸಲಾಗಿದೆಯಂತೆ. ಅವು ಯಾವುದು ಎಂಬುದನ್ನು ತಿಳಿದುಕೊಳ್ಳಿ.
*ಅಡುಗೆ ಎಣ್ಣೆ: ಯಾವ ಎಣ್ಣೆಯಲ್ಲಿ ಒಮೇಗಾ 3 ಫ್ಯಾಟಿ ಆ್ಯಸಿಡ್ ಇವೆ ಅಥವಾ ವಿಟಮಿನ್ ಡಿ ಇದೆ ಎಂದು ಕಂಪನಿಗಳು ಹೇಳುತ್ತವೆ. ಆದರೆ ಆ ಎಣ್ಣೆ ಪೂರ್ತಿಯಾಗಿ ಸಸ್ಯಾಹಾರವಾಗಿಲ್ಲ. ಈ ಎಣ್ಣೆಯಲ್ಲಿ ಕುರಿಯಲ್ಲಿ ಸಿಗುವ ಲೆನೊಲಿನ್ ಎಂಬ ಅಂಶವಿರುತ್ತದೆ.
*ರಿಫೈನ್ಡ್ ಸಕ್ಕರೆ: ನೀವು ರಿಫೈನ್ಡ್ ಸಕ್ಕರೆ ಶುಚಿ ಮಾಡಲು ನ್ಯಾಚುರಲ್ ಕಾರ್ಬನ್ ಬಳಸುತ್ತಾರೆ. ಇದನ್ನು ಜಾನುವಾರಿನ ಮೂಳೆಯಿಂದ ತಯಾರಿಸಲಾಗುತ್ತದೆ.
*ಜಾಮ್ ಮತ್ತು ಜೆಲ್ಲಿ: ಜಾಮ್ ಮತ್ತು ಜೆಲ್ಲಿ ತಯಾರಿಸಲು ಮಾಂಸಾಹಾರವಾದ ಜಿಲೆಟಿನ್ ಬಳಸಲಾಗುತ್ತದೆ.
*ಸೂಪ್: ರೆಸ್ಟೋರೆಂಟ್‌ನಲ್ಲಿ ಸೇವಿಸುವ ವೆಜ್ ಸೂಪಿನಲ್ಲಿ ಮಾಂಸಾಹಾರವಿರುತ್ತದೆ. ಪೂರ್ತಿಯಾಗಿ ಅಲ್ಲದೇ ಹೋದರೂ, ಅದರ ಕೆಲವು ಉತ್ಪನ್ನಗಳನ್ನು ಬಳಸುತ್ತಾರೆ.
*ಬಿಯರ್, ವೈನ್: ಈ ಶರಾಬು ಶುದ್ಧೀಕರಿಸಲು ಇಂಜಿನ್ಗ್ಲಾಸ್ ಬಳಸುತ್ತಾರೆ. ಇದನ್ನು ಮೀನಿನ ಬ್ಲೆಡರ್‌ನಿಂದ ತಯಾರಿಸುತ್ತಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.