ನಾಮಪತ್ರ ಸಲ್ಲಿಕೆ ವೇಳೆ ಅಪೂರ್ಣ ಆಸ್ತಿ ವಿವರ ಸಲ್ಲಿಕೆ; ಪ್ರಜ್ವಲ್ ಗೆ ಸಂಕಷ್ಟ

ಬುಧವಾರ, 15 ಮೇ 2019 (09:41 IST)
ಹಾಸನ : ನಾಮಪತ್ರ ಸಲ್ಲಿಕೆ ವೇಳೆ ಅಪೂರ್ಣ ಆಸ್ತಿ ವಿವರ ಸಲ್ಲಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ಗೆ ಇದೀಗ ಸಂಕಷ್ಟ ಎದುರಾಗಿದೆ.




ನಾಮಪತ್ರ ಸಲ್ಲಿಸುವ  ವೇಳೆ ನೀಡಲಾದ ಆಸ್ತಿ ವಿವರದಲ್ಲಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ತಮ್ಮ ಪಾಲುದಾರಿಕೆ ಕಂಪೆನಿಗಳ ವ್ಯವಹಾರ ಮುಚ್ಚಿಟ್ಟಿದ್ದರು. ಈ ಕುರಿತು ಆರೋಪ ಮಾಡಿದ ಬಿಜೆಪಿ ಅಭ್ಯರ್ಥಿ ಎ ಮಂಜು ಅವರು  ಪ್ರಜ್ವಲ್ ನಾಮಪತ್ರ ತಿರಸ್ಕಾರ ಮಾಡುವಂತೆ ಆಯೋಗಕ್ಕೆ ಮನವಿ ಮಾಡಿದ್ದರು.


ಇದೀಗ ರಾಜ್ಯ ಚುನಾವಣಾ ಆಯೋಗ ಈ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳುವಂತೆ ಹಾಸನ ಜಿಲ್ಲಾ ಚುನಾವಣಾಧಿಕಾರಿಗೆ ಸೂಚನೆ ನೀಡಿದೆ. ಇದು ಪ್ರಜ್ವಲ್ ಗೆ ಕಂಟಕವಾಗಿ ಪರಿಣಮಿಸಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ