ಮೋದಿಗೆ ಓಟು ಹಾಕದೇ ಇರೋರು ತಾಯ್ಗಂಡರಂತೆ- ಸಿ.ಟಿ ರವಿಯಿಂದ ವಿವಾದಾತ್ಮಕ ಹೇಳಿಕೆ
ಭಾನುವಾರ, 14 ಏಪ್ರಿಲ್ 2019 (10:23 IST)
ಚಿಕ್ಕಮಗಳೂರು : ಮೋದಿಗೆ ಓಟು ಹಾಕದೇ ಇರೋರು ತಾಯ್ಗಂಡರಂತೆ ಎಂದು ಚಿಕ್ಕಮಗಳೂರು ನಗರ ಶಾಸಕ ಸಿ.ಟಿ ರವಿ ವಿವಾದತ್ಮಕ ಹೇಳಿಕೆ ನೀಡಿದ್ದಾರೆ.
ತಮ್ಮ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿರುವ ಸಿಟಿ ರವಿಯವರು ಯಾರಾದ್ರು ಜಾತಿಗೆ ಕಾರಣಕ್ಕೆ, ಧರ್ಮದ ಕಾರಣಕ್ಕೆ ಮತ ಹಾಕದೇಹೋದರೆ ಉಂಡ ಮನೆಗೆ ದ್ರೋಹ ಬಗೆದಂತೆ ಇಲ್ಲ ನಮ್ಮ ಹಳ್ಳಿಕಡೆಯಲ್ಲಿ ಕರೆಯುವ ತಾಯ್ಗಂಡ ಅನ್ನೋ ರೀತಿ ಅಂತ ಹೇಳಿದ್ದಾರೆ.
ಇನ್ನು ಈ ವಿಡಿಯೋ ಸಾಮಾಜಿ ಜಾಲತಾಣದಲ್ಲಿ ವೈರಲ್ ಆಗಿದ್ದು, ಬಾರೀ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೇ ಚುನಾವಣಾ ಆಯೋಗ ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.