ನೀವು ನನಗೆ ವೋಟ್ ಮಾಡದಿದ್ದರೂ ನಾನು ನಿಮ್ಮ ಕೆಲಸ ಮಾಡುವೆ ಎಂದ ವರುಣ್ ಗಾಂಧಿ

ಸೋಮವಾರ, 22 ಏಪ್ರಿಲ್ 2019 (07:55 IST)
ನವದೆಹಲಿ: ನೀವು ನನಗೆ ವೋಟ್ ಮಾಡದಿದ್ದರೂ ನಾನು ನಿಮ್ಮ ಪರವಾಗಿ ಕೆಲಸ ಮಾಡುವೆ ಎಂದು ಬಿಜೆಪಿ ನಾಯಕ ವರುಣ್ ಗಾಂಧಿ ಮುಸ್ಲಿಮರನ್ನು ಉದ್ದೇಶಿಸಿ ಹೇಳಿಕೆ ನೀಡಿದ್ದಾರೆ.


ಚುನಾವಣಾ ರ್ಯಾಲಿಯೊಂದರಲ್ಲಿ ಮಾತನಾಡಿದ ಬಿಜೆಪಿ ಅಭ್ಯರ್ಥಿ ವರುಣ್ ಗಾಂಧಿ ‘ನೀವು ನನಗೆ ಮತ ಹಾಕಿದರೆ ಸಂತೋಷ. ಆದರೆ ಒಂದು ವೇಳೆ ಮತ ಹಾಕದಿದ್ದರೂ ನನಗೆ ಪರವಾಗಿಲ್ಲ. ನಾನು ನಿಮ್ಮ ಪರವಾಗಿ ಕೆಲಸ ಮಾಡುತ್ತೇನೆ’ ಎಂದಿದ್ದಾರೆ.

ಕೆಲವು ದಿನಗಳ ಹಿಂದೆ ವರುಣ್ ತಾಯಿ ಮನೇಕಾ ಗಾಂಧಿ ಇದಕ್ಕೆ ತದ್ವಿರುದ್ಧವಾಗಿ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದರು. ಇದೀಗ ವರುಣ್ ಗಾಂಧಿ ಮುಸ್ಲಿಮರ ಓಲೈಕೆ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ       

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ