ಗಣೇಶ ಮತ್ತು ಮಾತೆ ಪಾರ್ವತಿದೇವಿ

WD
ಎಲ್ಲ ಮಕ್ಕಳು ಪ್ರಾಣಿಗಳೊಡನೆ ಆಡುವಂತೆ, ಆದೊಂದು ದಿನ ಮಗು ಗಣೇಶ ಬೆಕ್ಕೊಂದರ ಜತೆ ಆಟವಾಡುತ್ತಿದ್ದ. ಬೆಕ್ಕಿನ ಬಾಲವನ್ನು ಎಳೆಯುವುದು ಮತ್ತು ಅದನ್ನು ನೆಲಕ್ಕೆ ಕೆಡವಿ ಅದಕ್ಕೆ ಚಿತ್ರ ಹಿಂಸೆ ಕೊಡುವುದರಲ್ಲಿ ಮಗ್ನನಾಗಿದ್ದನು.

ತಾನು ಏನು ಮಾಡುತ್ತಿದ್ದೇನೆ ಎಂದು ತಿಳಿಯದ ಗಣೇಶ, ಆ ಬೆಕ್ಕನ್ನು ಹಾಗೆಯೇ ಬಿಟ್ಟು ತನ್ನ ತಾಯಿ ಪಾರ್ವತಿಯನ್ನು ಭೇಟಿ ಮಾಡಲು ಕೈಲಾಸ ಪರ್ವತಕ್ಕೆ ಬಂದನು. ಧೂಳು ಮೆತ್ತಿದ್ದ ಪಾರ್ವತಿ ಗಾಯದಿಂದ ನರಳುತ್ತಾ ಕೂಡಿ ಅಸ್ವಸ್ಥಳಾಗಿ ಬಳಲುತ್ತಿರುವುದನ್ನು ನೋಡಿದನು.

ಇದನ್ನು ಕಂಡು ವ್ಯಾಕುಲಗೊಂಡ ಗಣೇಶ ತಾಯಿಯ ಅಸ್ವಸ್ಥತೆಯ ಕಾರಣವನ್ನು ವಿಚಾರಿಸಿದ. ತನ್ನ ಈ ಸ್ಥಿತಿಗೆ ಗಣೇಶನೆ ಕಾರಣ ಎಂದು ಪಾರ್ವತಿ ತಿಳಿಸಿದಾಗ ಗಣೇಶ ಅಚ್ಚರಿಗೊಂಡ. ಬೆಕ್ಕಿನ ರೂಪದಲ್ಲಿದ್ದುದು ತಾನೇ ಎಂದು ಪಾರ್ವತಿ ಗಣೇಶನಿಗೆ ತಿಳಿಸಿದಳು.

ಎಲ್ಲಾ ಜೀವಿತ ಪ್ರಾಣಿಗಳು ದೈವಿಕ ಪರಮಸತ್ತ್ವ ಎಂಬುದು ನಮಗೆ ಈ ಕಥೆಯಿಂದ ತಿಳಿದುಬರುತ್ತದೆ. ನಾವು ನಮ್ಮ ಸಹಚರರಾದ ಪ್ರಾಣಿಗಳೇ ಆಗಲಿ ಅಥವಾ ಮನುಷ್ಯರೇ ಆಗಲಿ ಯಾರನ್ನೇ ಹಿಂಸಿಸಿದರೂ ಅದು ನಾವು ದೇವರನ್ನು ಹಿಂಸಿಸಿದಂತೆ.

ಗಣೇಶನು ಈ ರೀತಿಯಾಗಿ ಒಂದು ನೀತಿ ಪಾಠವನ್ನು ಕಲಿತನು ಮತ್ತು ನಾವೆಲ್ಲರೂ ಕೂಡ ನಮ್ಮ ಜೀವಿತಾವಧಿಯಲ್ಲಿ ಇಂತಹ ಪಾಠವನ್ನು ಕಲಿಯಬೇಕೆಂಬುವುದೆ ಈ ಕಥೆಯ ಆಶಯ.

ವೆಬ್ದುನಿಯಾವನ್ನು ಓದಿ