Men health: ಪುರುಷರಲ್ಲಿ ಬಂಜೆತನ ನಿವಾರಣೆಯಾಗಬೇಕೆಂದರೆ ಇದೊಂದು ಜ್ಯೂಸ್ ಸಾಕು

Krishnaveni K

ಗುರುವಾರ, 10 ಏಪ್ರಿಲ್ 2025 (11:48 IST)
ಬೆಂಗಳೂರು: ಮಹಿಳೆಯರು ಮಾತ್ರವಲ್ಲ, ಪುರುಷರಲ್ಲೂ ಫಲವಂತಿಕೆ ಸಮಸ್ಯೆ ಇದ್ದೇ ಇರುತ್ತದೆ. ಪುರುಷರಲ್ಲಿ ಬಂಜೆತನ ನಿವಾರಣೆಯಾಗಬೇಕೆಂದರೆ ಇದೊಂದು ಜ್ಯೂಸ್ ಸೇವನೆ ಮಾಡಿದರೆ ಸಾಕು.

ಪುರುಷರಲ್ಲಿ ವೀರ್ಯಾಣು ಸಂಖ್ಯೆ ಸಾಕಷ್ಟು ಇಲ್ಲದೇ ಇದ್ದರೆ, ಆರೋಗ್ಯಕರ ವೀರ್ಯಾಣು ಉತ್ಪತ್ತಿಯಾಗದೇ ಇದ್ದರೆ ಅಥವಾ ಇನ್ನಿತರ ಯಾವುದೇ ಲೈಂಗಿಕ ಸಮಸ್ಯೆಗಳಿದ್ದಲ್ಲಿ ಅವರ ದೈಹಿಕ ಸಾಮರ್ಥ್ಯ ಹೆಚ್ಚಿಸಲು ಈ ಜ್ಯೂಸ್ ಸಹಾಯಕ.

ನುಗ್ಗೆಸೊಪ್ಪಿನ ಜ್ಯೂಸ್
ಪ್ರತಿನಿತ್ಯ ಖಾಲಿ ಹೊಟ್ಟೆಯಲ್ಲಿ ನುಗ್ಗೆಸೊಪ್ಪು ಪುಡಿಯ ಜ್ಯೂಸ್ ಮಾಡಿ ಸೇವನೆ ಮಾಡುವುದರಿಂದ ಪುರುಷರಿಗೆ ಅನೇಕ ಉಪಯೋಗಗಳಿವೆ. ಬಂಜೆತನ ಸಮಸ್ಯೆ ನಿವಾರಣೆ ಮಾತ್ರವಲ್ಲದೆ, ದೈಹಿಕ ಶಕ್ತಿ, ರೋಗ ನಿರೋಧಕ ಶಕ್ತಿ ಹೆಚ್ಚಿಸಬಹುದು. ಅದರಲ್ಲೂ ಪುರುಷರಲ್ಲಿ ಫಲವಂತಿಕೆ ಹೆಚ್ಚಿಸಲು, ಪ್ರಾಸ್ಟೇಟ್ ಕ್ಯಾನ್ಸರ್ ಇತ್ಯಾದಿ ಸಮಸ್ಯೆಗಳು ಬಾರದಂತೆ ತಡೆಗಟ್ಟಲು ಈ ಜ್ಯೂಸ್ ಸಹಕಾರಿ.

ಜ್ಯೂಸ್ ಮಾಡುವುದು ಹೇಗೆ?
ಒಂದು ಲೋಟ ಬಿಸಿ ನೀರಿಗೆ ಒಂದು ಸ್ಪೂನ್ ನುಗ್ಗೆಸೊಪ್ಪಿನ ಪುಡಿ ಸೇರಿಸಿಕೊಂಡು ಚೆನ್ನಾಗಿ ಕಲಸಿಕೊಳ್ಳಿ. ಇದಕ್ಕೆ ಬೇಕಿದ್ದಲ್ಲಿ ರುಚಿಗೆ ತಕ್ಕಷ್ಟು ಸ್ವಲ್ಪ ಜೇನು ತುಪ್ಪ, ನಿಂಬೆ ರಸವನ್ನೂ ಸೇರಿಸಿಕೊಂಡು ಸೇವನೆ ಮಾಡಬಹುದು. ಇದು ಆರೋಗ್ಯಕ್ಕೆ ಅತ್ಯುತ್ತಮ ಜ್ಯೂಸ್ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ