ಬೂಂದಿ ಲಡ್ಡು

WDWD
ಬೇಕಾಗುವ ಸಾಮಗ್ರಿಗಳು : ಕಡಲೆ ಹುಡಿ-1 ಕಪ್
ಕೇಸರಿ-1 ಚಿಟಿಕೆ
ಏಲಕ್ಕಿ ಹುಡಿ-1 ಚಿಟಿಕೆ
ಅಕ್ಕಿ ಹುಡಿ-1 ಟೇಬಲ್ ಚಮಚ
ಬೇಕಿಂಗ್ ಪೌಡರ್-1 ಚಿಟಿಕೆ
ಗೋಡಂಬಿ- 1 ಟೇಬಲ್ ಚಮಚ
ಎಣ್ಣೆ-ಹುರಿಯಲು ಬೇಕಾದಷ್ಟು
ಸಕ್ಕರೆ-2 ಕಪ್
ನೀರು -2 ಕಪ್
ವಿಧಾನ:
ಕಡಲೆ ಹುಡಿ,ಅಕ್ಕಿ ಹುಡಿ, ಬೇಕಿಂಗ್ ಪೌಡರ್ ಮತ್ತು ಬಣ್ಣದೊಂದಿಗೆ ಚೆನ್ನಾಗಿ ಕಲಸಿ ನಯವಾದ ಮತ್ತು ಗಟ್ಟಿಯಾದ ಹಿಟ್ಟು ತಯಾರಿಸಿ.ಎಣ್ಣೆಯನ್ನು ಕುದಿಸಿ.ಹಿಟ್ಟನ್ನು ವೃತ್ತಾಕಾರದ ಏಕ ಮಾತ್ರ ತೂತು ಇರುವ ಜರಡಿಯಿಂದ ಎಣ್ಣೆಗೆ ಹಾಕುತ್ತಿರಿ.

ಇದರಿಂದಾಗಿ ಹಿಟ್ಟು ಚಿಕ್ಕ ಚಿಕ್ಕ ಉಂಡೆಗಳಾಗಿ ಎಣ್ಣೆಗೆ ಬೀಳುತ್ತಿರುತ್ತವೆ.ಇವುಗಳನ್ನು ಹುರಿದು ಪಕ್ಕದಲ್ಲಿಟ್ಟುಕೊಳ್ಳಿ.ಸಕ್ಕರೆಯನ್ನು ನೀರಿನೊಂದಿಗೆ ಬೆರೆಸಿ ಕುದಿಸಿ.ಸಕ್ಕರೆ ಪಾಕವು ಇಂಗಿ ಅರ್ಧದಷ್ಟಾಗುವಾಗ ಬೆಂಕಿಯಿಂದ ಕೆಳಗಿರಿಸಿ.

ಕೇಸರಿ ಮತ್ತು ಏಲಕ್ಕಿ ಮತ್ತು ಹುರಿದ ಬೂಂದಿ(ಹಿಟ್ಟಿನಿಂದ ಮಾಡಿದ ಚಿಕ್ಕ ಉಂಡೆ)ಗಳನ್ನು ಸಕ್ಕರೆ ಪಾಕದೊಂದಿಗೆ ಚೆನ್ನಾಗಿ ಮಿಶ್ರ ಮಾಡಿ. ಈ ಮಿಶ್ರಣವು ತಣ್ಣಗಾದರೆ ಉಂಡೆಗಳನ್ನಾಗಿ ಮಾಡಲಾಗುವುದಿಲ್ಲ, ಆದುದರಿಂದ ಬಿಸಿಯಿರುವಾಗಲೇ ಉಂಡೆಗಳನ್ನಾಗಿ ಮಾಡಿ.ಈಗ ಬೂಂದಿ ಲಡ್ಡು ತಯಾರ್.

ವೆಬ್ದುನಿಯಾವನ್ನು ಓದಿ