ಚಳಿಗಾಲದಲ್ಲಿ ಏಳು ಸೂತ್ರಗಳು

ಬುಧವಾರ, 5 ಡಿಸೆಂಬರ್ 2007 (21:08 IST)
ಚಳಿಗಾಲ ಷುರುವಾಗುತ್ತಿದ್ದಂತೆ ಹಿಂಬಾಲಿಸಿ ಬರುತ್ತದೆ ಮಾರಕ ಶೀತ ಮತ್ತು ಫ್ಲೂ ಜ್ವರ. ಆದರೆ ಕೆಲವು ಸರಳ ಕ್ರಮಗಳನ್ನು ಕೈಗೊಂಡರೆ ರೋಗ ಆವರಿಸುವ ಸಾಧ್ಯತೆ ಮತ್ತು ನಿಮ್ಮ ಸ್ನೇಹಿತರಿಗೆ, ಕುಟುಂಬಕ್ಕೆ ಮತ್ತು ಸಹೋದ್ಯೋಗಿಗಳಿಗೆ ರೋಗಾಣುಗಳನ್ನು ಹರಡುವುದನ್ನು ತಡೆಯಬಹುದು.

ಇವೆಲ್ಲ ಸಾಮಾನ್ಯ ಜ್ಞಾನದ ಕ್ರಮಗಳಾಗಿವೆ ಎಂದು ಸೇಂಟ್ ಲೂವಿಸ್ ವಿ.ವಿ.ಯ ಕೋಆರ್ಡಿನೇಟರ್ ಲಾಂಗಾನ್ ಹೇಳುತ್ತಾರೆ.1.ಫ್ಲೂ ಚುಚ್ಚುಮದ್ದು ಹಾಕಿಸಿಕೊಳ್ಳುವುದು. ಇದು ಫ್ಲೂ ಬರದಂತೆ ತಡೆಯಲು, ಅದನ್ನು ನಿವಾರಿಸಲು ಸುಲಭೋಪಾಯ. ರೋಗನಿರೋಧಕ ಶಕ್ತಿ ಕಡಿಮೆಯಿರುವ ಮಕ್ಕಳಿಗೆ ಮತ್ತು ಹಿರಿಯರಿಗೆ ಇದು ಅತ್ಯವಶ್ಯಕ.

2.ಆಗಾಗ್ಗೆ ಕೈತೊಳೆಯುತ್ತಿರಿ, ಫ್ಲೂ ಮುಂತಾದ ಉಸಿರಾಟದ ವೈರಸ್ ಹರಡುವುದನ್ನು ತಡೆಯಲು ಸಾಬೂನು ಮತ್ತು ನೀರಿನಿಂದ ನಿಯಮಿತವಾಗಿ ಕೈತೊಳೆಯುವುದು ಪರಿಣಾಮಕಾರಿ. ನೀವು ಕೈಗೆ ಸಾಬೂನು ಬಳಸದಿದ್ದರೆ ಆಲ್ಕೊಹಾಲ್ ಮೂಲದ ಜೆಲ್ ಬಳಸಿ ಅದು ಒಣಗುವವರೆಗೆ ಉಜ್ಜಬೇಕು.3.ನಿಮ್ಮ ಕಣ್ಣುಗಳನ್ನು, ಮೂಗನ್ನು ಮತ್ತು ಬಾಯಿಯನ್ನು ಕೈಯಿಂದ ಮುಟ್ಟಬೇಡಿ. ಇವು ಎಲ್ಲ ಸೂಕ್ಷ್ಮಜೀವಿಗಳ ಪ್ರವೇಶಕ್ಕೆ ಸುಲಭವಾದ ದಾರಿ.

4. ರೋಗಗ್ರಸ್ಥ ವ್ಯಕ್ತಿಗಳ ಸಾಮಿಪ್ಯದಲ್ಲಿ ಇರಬೇಡಿ. 5.ಇನ್ನಿತರ ಒಳ್ಳೆಯ ಅಭ್ಯಾಸಗಳನ್ನು ಬೆಳೆಸಿಕೊಳ್ಳಿ. ನಿಮ್ಮ ರೋಗನಿರೋಧಕ ವ್ಯವಸ್ಥೆಯನ್ನು ಶಕ್ತಿಶಾಲಿಯಾಗಿ ಇಡಲು ಸಾಕಷ್ಟು ನಿದ್ರೆ ಮಾಡಿ. ಪೌಷ್ಠಿಕ ಆಹಾರ ಸೇವಿಸಿ, ಯಥೇಚ್ಛ ನೀರು ಕುಡಿಯಿರಿ. ಮಾನಸಿಕ ಒತ್ತಡ ನಿರ್ವಹಣೆ ಕಲಿಯಿರಿ.

6. ನೀವು ಕೆಮ್ಮುವಾಗ ಅಥವಾ ಸೀನುವಾಗ ಮೂಗು ಮತ್ತು ಬಾಯಿಗೆ ಅಡ್ಡವಾಗಿ ಕರವಸ್ತ್ರ ಅಥವಾ ಕೈಯನ್ನು ಹಿಡಿಯಿರಿ. ಇದರಿಂದ ಇತರರಿಗೆ ಕಾಯಿಲೆ ಹರಡದಂತೆ ತಡೆಯಬಹುದು. 7. ಕಾಯಿಲೆ ಬಂದಿದ್ದರೆ ಮನೆಯಲ್ಲೇ ಉಳಿಯಿರಿ. ಜ್ವರ ಅಥವಾ ಕೆಮ್ಮು ಬಂದಿದ್ದರೆ ಮನೆಯಲ್ಲಿ ಉಳಿಯಲು ಪ್ರಯತ್ನಿಸಿ. ಇದರಿಂದ ಇತರರಿಗೆ ಸೋಂಕು ಹರಡುವುದನ್ನು ತಡೆಯಬಹುದು.

ವೆಬ್ದುನಿಯಾವನ್ನು ಓದಿ