ಬೆಂಗಳೂರು: ಹಿಂದಿನ ಕಾಲದಲ್ಲಿ ವೀಳ್ಯದೆಲೆ ಸೇವಿಸುವುದು ಒಂದು ಪದ್ಧತಿಯಾಗಿತ್ತು. ಆದರೆ ಈಗ ಅದು ಕಡಿಮೆಯಾಗುತ್ತಿದೆ. ಆದರೆ ಆಯುರ್ವೇದದ ಪ್ರಕಾರ ಈ ಒಂದು ಆರೋಗ್ಯ ಸಮಸ್ಯೆಯಿದ್ದಲ್ಲಿ ಪ್ರತಿನಿತ್ಯ ವೀಳ್ಯದೆಲೆ ಸೇವನೆ ಮಾಡುವುದು ಉತ್ತಮ.
ವೀಳ್ಯದೆಲೆಯನ್ನು ಸೇವಿಸುವಾಗ ಹೊಗೆ ಸೊಪ್ಪು ಸಹಿತ ಸೇವಿಸಬೇಡಿ. ಯಾಕೆಂದರೆ ಹೊಗೆ ಸೊಪ್ಪು ಖಂಡಿತಾ ಆರೋಗ್ಯಕ್ಕೆ ಒಳ್ಳೆಯದಲ್ಲ. ಆದರೆ ಅಡಿಕೆ, ಸುಣ್ಣದ ಜೊತೆ ಸೇವನೆ ಮಾಡುವುದು ಸಮಸ್ಯೆಯಲ್ಲ. ಇದಲ್ಲದೆ ಕೇವಲ ವೀಳ್ಯದೆಲೆ ಮಾತ್ರ ಜಗಿದರೆ ಇನ್ನೂ ಉತ್ತಮ.
ಯಾಕೆಂದರೆ ವೀಳ್ಯದೆಲೆಯಲ್ಲಿ ಸಾಕಷ್ಟು ಆರೋಗ್ಯಕರ ಅಂಶವಿದೆ. ವೀಳ್ಯದೆಲೆಯಲ್ಲಿ ವಾತ ಮತ್ತು ಪಿತ್ತ, ಕಫವನ್ನು ಸಮಸ್ಥಿತಿಯಲ್ಲಿಡುವ ಗುಣವಿದೆ. ಮನುಷ್ಯನಲ್ಲಿ ರೋಗ ಬಾರದಂತೆ ತಡೆಯಲು ಇದು ಸಮತೋಲನದಲ್ಲಿರಬೇಕು.
ವಿಶೇಷವಾಗಿ ಜೀರ್ಣ ಸಮಸ್ಯೆಯಿರುವವರು ಪ್ರತಿನಿತ್ಯ ವೀಳ್ಯಸೇವನೆ ಮಾಡುವುದು ಉತ್ತಮ. ಇದಕ್ಕೆಂದೇ ಹಿರಿಯರು ಊಟವಾದ ಬಳಿಕ ವೀಳ್ಯದೆಲೆ ಸೇವನೆ ಮಾಡುವ ಸಂಪ್ರದಾಯವಿಟ್ಟುಕೊಂಡಿದ್ದರು. ಇದರಲ್ಲಿ ಜೀರ್ಣಾಂಗ ವ್ಯವಸ್ಥೆಯ ಆರೋಗ್ಯವನ್ನು ಬಲಗೊಳಿಸುವ, ದೇಹದ ಪಿಎಚ್ ಗುಣಮಟ್ಟವನ್ನು ಸಮತೋಲನಗೊಳಿಸುವ ಅಂಶವಿದೆ. ಹೀಗಾಗಿ ತಪ್ಪದೇ ಪ್ರತಿನಿತ್ಯ ಸೇವಿಸಿ.