ಚಳಿಗಾಲ ಬರುತ್ತಿರುವಂತೆ ವಿಟಮಿನ್ ಸಿ ಅಭಾವ

ಶನಿವಾರ, 22 ನವೆಂಬರ್ 2008 (17:55 IST)
ಚಳಿಗಾಲಕ್ಕೆ ವಿಟಮಿನ್ ಸಿ ಅತ್ಯಗತ್ಯ. ಆದರೆ ಈ ಬಾರಿಯ ಚಳಿಗಾಲದಲ್ಲಿ ನೀವು ಇನ್ಯಾವುದಾದರೂ ಪರ್ಯಾಯಗಳಿಗೆ ಮೊರೆಹೋಗಬೇಕಾದೀತು. ಕಾರಣ ರಾಷ್ಟ್ರದಲ್ಲಿ ವಿಟಮಿನ್‌ ಸಿಯ ತೀವ್ರ ಕೊರತೆ ಉಂಟಾಗಿದೆ. ಆರ್ಥಿಕ ಮತ್ತು ಬೆಲೆನಿಯಂತ್ರಣ ಅಂಶಗಳು ಫಾರ್ಮಾಸುಟಿಕಲ್ ಕಂಪೆನಿಗಳಿಗೆ ವಿಟಮಿನ್ ಅನ್ನು ಅಲಭ್ಯವಾಗಿಸಿದೆ.

ಸೆಲಿನ್, ಸುಕ್ಸೀ, ಚೆವ್ಸೀ ಮತ್ತು ಲಿಮ್ಸೀ ಮುಂತಾದ ವಿಟಮಿನ್ ಸಿಗಳ ಅತಿವೇಗವಾಗಿ ಮುಗಿಯುತ್ತಿದೆ. ಕಳೆದ ಎರಡ್ಮೂರು ತಿಂಗಳಿಂದ ಇವುಗಳ ಪೂರೈಕೆ ಇಲ್ಲ. ಚಳಿಗಾಲದಲ್ಲಿ ವಿಟಮಿನಿ ಸಿಯ ಬೇಡಿಕೆ ಬಹುತೇಕ ದ್ವಿಗುಣಗೊಳ್ಳುತ್ತದಾದರೂ, ಹೊಸ ದಾಸ್ತಾನು ಬಂದಿಲ್ಲ ಎಂದು ಅಖಿಲ ದೆಹಲಿ ಕೆಮಿಸ್ಟ್ ಅಸೋಸಿಯೇಶನ್ ಅಧ್ಯಕ್ಷ ಆರ್.ಕೆ.ಭಾಟಿಯಾ ಹೇಳುತ್ತಾರೆ.

ಅದರ ತಯಾರಿಯ ಕಚ್ಚಾವಸ್ತುಗಳ ಬೆಲೆ ಇದ್ದಕ್ಕಿದ್ದಂತೆ ಏರಿರುವುದು ವಿಟಮಿನ್ ಸಿ ಔಷಧಿ ಅಂಗಡಿಗಳಿಂದ ಮಾಯವಾಗಲು ಕಾರಣ. ಕಚ್ಚಾವಸ್ತುವನ್ನು ಚೀನದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಇದು ಕೈಗೆಟಕುವ ದರಕ್ಕೆ ಲಭಿಸಬೇಕಿದ್ದರೆ, ಸರಕಾರದ ನಿರ್ಧಾರ ಅತ್ಯಗತ್ಯ. ವಿಟಮಿನ್ ಸಿ ಔಷಧಿಗಳ ಬೆಲೆಯನ್ನು ಪರಿಷ್ಕರಣೆ ಮಾಡದಿರುವುದು ಕೊರತೆಗೆ ಕಾರಣ ಎಂದು ಉದ್ಯಮ ತಜ್ಞರು ಆಪಾದಿಸಿದ್ದಾರೆ.

ವಿಟಮಿನ್ ಸಿ ತಯಾರಿಗಾಗಿ ಬಳಸುವ ಶೇ.60ರಷ್ಟು ಕಚ್ಚಾವಸ್ತುಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಸರ್ಕಾರವು ನಿಗದಿ ಮಾಡಿರುವ ಬೆಲೆಗೆ ಇದನ್ನು ತಯ್ಯಾರಿಸಿ ಮಾರಾಟಮಾಡುವುದು ದೇಶೀಯ ಉತ್ಪಾದಕರಿಗೆ ಕಷ್ಟಸಾಧ್ಯ ಎಂದು ಇಂಡಿಯನ್ ಫಾರ್ಮಾಸ್ಯೂಟಿಕಲ್ ಅಲಾಯನ್ಸ್‌ನ ಪ್ರಧಾನ ಕಾರ್ಯದರ್ಶಿ ಡಿ.ಜಿ.ಶಾ ಹೇಳಿದ್ದಾರೆ. ಸರ್ಕಾರ ನಿಗದಿ ಮಾಡಿರುವುದಕ್ಕಿಂತ ಹೆಚ್ಚಿನ ಬೆಲೆಗೆ ಇದನ್ನು ಮಾರುವಂತಿಲ್ಲ.

ಚಳಿಗಾಲದಲ್ಲಿ ಹೆಚ್ಚಾಗಿ ಶೀತ, ಅಲರ್ಜಿ ಮತ್ತು ಉಸಿರಾಟದ ತೊಂದರೆಗಳಿಗೆ ವಿಟಮಿನ್ ಸಿ ನೀಡಲಾಗುತ್ತಿದೆ. ಇದೀಗ ದಾಸ್ತಾನು ಕೊರತೆ ತಲೆದೋರಿರುವ ಕಾರಣ ನೈಸರ್ಗಿಕ ಔಷಧೀಯ ಮೂಲಗಳಿಗೆ ಮೊರೆ ಹೋಗುವಂತೆ ಸಲಹೆ ನೀಡುವಂತೆ ವೈದ್ಯರನ್ನು ಪ್ರೇರೇಪಿಸುತ್ತದೆ.

ನೆಲ್ಲಿಕಾಯಿ, ನಿಂಬೆ ಹಣ್ಣು ಮುಂತಾದವುಗಳಿಂದ ವಿಟಮಿನ್ ಸಿ ಲಭಿಸುತ್ತಾದರೂ, ವಿಟಮಿನ್ ಸಿ ಕೊರತೆಯಿಂದ ಬಳಲುತ್ತಿದ್ದರೆ, ಔಷಧಿಯ ಸೇವನೆಯನ್ನು ನಿಲ್ಲಿಸುವುದು ಅಪಾಯಕಾರಿ ಎಂದು ವೈದ್ಯರೊಬ್ಬರು ಹೇಳುತ್ತಾರೆ. ವಿಟಮಿನ್ ಸಿಯು ಸ್ಕರ್ವಿ ಸಮಸ್ಯೆಗೆ ಹಾದಿಯಾಗುತ್ತದೆ. ಇದು ಮಕ್ಕಳ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ.


ವೆಬ್ದುನಿಯಾವನ್ನು ಓದಿ