ಸನ್‌ಶೈನ್ ವಿಟಮಿನ್ ಮೂಳೆಗಳಿಗೆ ಒಳ್ಳೆಯದು ಮತ್ತು ಕ್ಯಾನ್ಸರ್ ಮತ್ತು ಮಧುಮೇಹ ಕಾಯಿಲೆಗಳಿಗೆ ಕಡಿವಾಣ ಹಾಕುತ್ತದೆಂದು ವೈದ್ಯರು ಅನೇಕ ವರ್ಷಗಳಿಂದ ಹೇಳುತ್ತಾ ಬಂದಿದ್ದಾರೆ. ಪ್ರತಿದಿನ ವಿಟಮಿನ್ ಡಿ ಸೇವನೆಯಿಂದ ನಮ್ಮ ಜೀವಿತಾವಧಿಯನ್ನುಕೂಡ ಹೆಚ್ಚಿಸುತ್ತದೆಂದು ಸಂಶೋಧನೆಯೊಂದು ಬಹಿರಂಗಮಾಡಿದೆ. ಅಂತಾರಾಷ್ಟ್ರೀಯ ಸಂಶೋಧಕರು ಅಧ್ಯಯನವೊಂದನ್ನು ನಡೆಸಿ ದಿನನಿತ್ಯ ವಿಟಮಿನ್ ಡಿ ಡೋಸ್ ಸೇವನೆಯಿಂದ ಸಾವಿನ ಅಪಾಯವನ್ನು ತಗ್ಗಿಸುತ್ತದೆಂದು ಪತ್ತೆಹಚ್ಚಿದ್ದಾರೆ.
ಮೂಳೆಗಳಲ್ಲದೇ ಬೇರೆ ಅಂಗಾಂಗಗಳ ಮೇಲೆ ವಿಟಮಿನ್ ಡಿ ಪರಿಣಾಮ ಬೀರುವುದು ಹೊಸದಾಗಿ ಪತ್ತೆಯಾಗಿದೆ. ನಿಮಗೆ ದಿನಕ್ಕೆ 4ರಿಂದ 5 ಮಾತ್ರೆಗಳ ಅವಶ್ಯಕತೆಯಿಲ್ಲ. ಬಹುಷಃ ಎಲ್ಲ ವಿಟಮಿನ್‌ಗಳ ಸೇವನೆಯನ್ನು ನೀವು ತ್ಯಜಿಸಬಹುದು ಎಂದು ಕ್ಯಾನ್ಸರ್ ಕುರಿತ ಅಂತಾರಾಷ್ಟ್ರೀಯ ಸಂಶೋಧಕ ಸಂಸ್ಥೆಯ ಡಾ.ಫಿಲಿಪ್ ಆಟಿಯರ್ ಹೇಳಿದ್ದಾರೆ.
ಸುಮಾರು 57.000 ರೋಗಿಗಳಿಗೆ ವಿಟಮಿನ್ ಡಿ ಪೂರಕಗಳನ್ನು ನೀಡುವ ಪರೀಕ್ಷೆಗಳನ್ನು ವಿಶ್ಲೇಷಣೆ ಮಾಡಿದ ಬಳಿಕ ವಿಟಮಿನ್ ಡಿ ಸೇವಿಸಿದವರಿಗೆ ಸಾವಿನ ಅಪಾಯ ಉಳಿದವರಿಗಿಂತ ಶೇ.7ರಷ್ಟು ಕಡಿಮೆಯಿರುವುದನ್ನು ಸಂಶೋಧಕರು ಪತ್ತೆಹಚ್ಚಿದರು. ಆದಾಗ್ಯೂ, ಸಂಶೋಧಕರ ಪ್ರಕಾರ ಆಹಾರಗಳ ಮೂಲಕ ಸಾಕಷ್ಟು ವಿಟಮಿನ್ ಪಡೆಯುವುದು ಸಾಕಾಗುವುದಿಲ್ಲ.
ವಿಟಮಿನ್ ಡಿಯ "1000 ಐ"ಯು ಮಟ್ಟವು ದೇಹಕ್ಕೆ ಲಭ್ಯವಾಗಬೇಕಾದರೆ ಸೂರ್ಯನ ಬಿಸಿಲಿನಲ್ಲಿ ಕನಿಷ್ಠ 10 ನಿಮಿಷಗಳ ಕಾಲವಾದರೂ ಕಳೆಯಬೇಕೆಂದು ಅವರು ಹೇಳಿದ್ದಾರೆ. ಮೀನು ,ಮೊಟ್ಟೆಯ ಹಳದಿ ಭಾಗ, ಲಿವರ್ ನೈಸರ್ಗಿಕವಾಗಿ ವಿಟಮಿನ್ ಡಿ ಪೌಷ್ಠಿಕಾಂಶ ಹೊಂದಿವೆ.