ನಿದ್ದೆಗುಳಿಗೆಯ ಪಾರ್ಶ್ವ ಪರಿಣಾಮಗಳು

PTI
ನಿದ್ರಾಹೀನತೆ ಹಾಗೂ ಮಾನಸಿಕ ಒತ್ತಡ ನವಾರಿಸಲು ಆಧುನಿಕ ಜನರು ಅನಿಯಂತ್ರಿತವಾಗಿ ಸೇವಿಸುವ ನಿದ್ದೆಗುಳಿಗಳು ಆರೋಗ್ಯಕ್ಕೆ ಹಿತಕರವಲ್ಲ ಎಂಬುದು ಹೊಸವಿಷಯವಲ್ಲ. ಆದರೆ ಇದರಿಂದ ಹೊಸ ರೋಗಗಳು ಕಾಣಿಸಕೊಳ್ಳುತ್ತವೆ ಎಂಬುದು ಇತ್ತೀಚಿನ ಮಾಹಿತಿ.

ಈ ರೀತಿ ನಿದ್ದೆ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ನಿದ್ದೆ ಮಂಪರಿನಿಂದ ಆರಂಭಗೊಂಡು ತಲೆನೋವಿನವರೆಗೆ ಸಾಗುವ ಅಡ್ಡಪರಿಣಾಮಗಳು ಉಂಟಾಗುತ್ತವೆ. ಒಂದೆರಡು ದಿನಗಳ ಮಟ್ಟಿಗೆ ಎಂದು ಈ ನಿದ್ದೆ ಮಾತ್ರೆಗಳಿಗೆ ಮರೆ ಹೋಗುವುದು ಕ್ರಮೇಣ ಅಭ್ಯಾಸವಾಗಿ ರೂಪುಗೊಳ್ಳುತ್ತದೆ.

ಎಚ್ಚರತಪ್ಪುವಿಕೆ, ನೆನಪು ಕಳೆದುಕೊಳ್ಳುವುದು ಕೂಡ ಉಂಟಾಗುವುದಲ್ಲದೆ, ಇದರಿಂದ ವ್ಯಕ್ತಿತ್ವ ಮತ್ತು ಪ್ರತಿಕ್ರಿಯೆಯ ಸಕಾಲಿಕತೆ ಬದಲಾಗುವ ಸಾಧ್ಯತೆಯಿದೆ. ಈ ಕಾರಣಕ್ಕಾಗಿ ನಿದ್ದೆ ಮಾತ್ರೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತೆಗೆದುಕೊಳ್ಳುವುದು ಉಚಿತವಲ್ಲ.

ಆದ್ದರಿಂದ, ಕೌಂಟರಿನಲ್ಲಿ ದೊರೆಯುವ ಮಾತ್ರೆಗಳಿಂದ ಹಿಡಿದು ಎಲ್ಲಾ ನಿದ್ರೆ ಔಷಧಿಗಳನ್ನು ವೈದ್ಯರ ಸಲಹೆ ಮೇರೆಗೆ ತೆಗೆದುಕೊಳ್ಳಬೇಕು.

ಸಾಮಾನ್ಯವಾಗಿ ನಿದ್ರಾಹೀನತೆಯಿಂದ ಬಳಲುವವರು ನಿದ್ದೆ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ, ಅವರೂ ಕೂಡ ನಿದ್ದೆ ಮಾತ್ರೆಗಳನ್ನು ತೆಗೆದುಕೊಳ್ಳುವಾಗ ಎಚ್ಚರಿಕೆಯಿಂದಿರಬೇಕು ಎನ್ನುತ್ತದೆ ಇತ್ತೀಚಿನ ಸಂಶೋಧನೆ.

ವೆಬ್ದುನಿಯಾವನ್ನು ಓದಿ