ಪುರುಷರಲ್ಲಿ ಹೃದಯಾಘಾತ ಹೆಚ್ಚಿಸುವ ಮೈಗ್ರೇನ್‌

ಮೈಗ್ರೇನ್ ತಲೆನೋವು ಹೊಂದಿರುವ ಪುರುಷರಲ್ಲಿ ಹೃದಯಾಘಾತ ಸಂಭವಿಸುವ ಸಂಭವ ಹೆಚ್ಚೆಂದು ಆರೋಗ್ಯರಂಗದ ಸಮೀಕ್ಷೆಯೊಂದು ತಿಳಿಸಿದೆ.

ಈ ಹಿಂದಿನ ವಿಶ್ಲೇಷಣೆಯು 12 ವರ್ಷಗಳ ವರದಿ ದಾಖಲೆಯ ನಂತರ, ಮೈಗ್ರೇನ್‌‌ಗೂ ಹೃದಯಾಘಾತಕ್ಕೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿತ್ತು.ಸಾಮಾನ್ಯವಾಗಿ ಮೈಗ್ರೇನ್ ಪುರುಷರಲ್ಲಿ ಕಾಣಿಸಿಕೊಳ್ಳುವುದು ಕಡಿಮೆಯಾಗಿದ್ದರೂ, ಮತ್ತಷ್ಟು ದೀರ್ಘಕಾಲೀನ ವರದಿ ದಾಖಲೆಯು ಅವೆರಡರ ನಡುವಿನ ಸಂಬಂಧವನ್ನು ತಿಳಿಸಬಹುದು.

ಅಂಕಿಅಂಶೀಯವಾಗಿ ಗಣನೀಯವಾಗಿಲ್ಲದಿದ್ದರೂ ಮೈಗ್ರೇನ್ ಹೊಂದಿರುವ ಪುರುಷರು ಪಾರ್ಶ್ವವಾಯು ಹೊಂದುವ ಸಾಧ್ಯತೆಯೂ ಹೆಚ್ಚಾಗಿದೆ. 55ವರ್ಷ ಕೆಳಗಿನ ಪುರುಷರಲ್ಲಿ ಲಘು ಪ್ರಮಾಣದಲ್ಲಿ ಮಾತ್ರ ಪಾರ್ಶ್ವವಾಯು ತೊಂದರೆ ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ