ಬಾಣಂತಿಯರು ಕುಳಿತು ಭಾರ ಹೆಚ್ಚಿಸಬೇಕಿಲ್ಲ !

PTI
ಹೆರಿಗೆ ಕಳೆದು ಬಾಣಂತನ ಕಾಲದಲ್ಲಿ ತಾಯಂದಿರು ಮನೆಯೊಳಗೇ ಕುಳಿತುಕೊಳ್ಳಬೇಕಿಲ್ಲ. ಹೀಗೆ ವ್ಯಾಯಾಮ ವಿಲ್ಲದ ಬದುಕು ದೇಹಭಾರವನ್ನು ಹೆಚ್ಚಿಸುತ್ತದೆ.

ಅನಗತ್ಯ ಬೊಜ್ಜು, ಕೊಬ್ಬಿನಂಶ, ಭಾರಹೆಚ್ಚಳ ನಿಯಂತ್ರಿಸಲು "ವಾಕಿಂಗ್‌" (ನಡೆಯುವ) ಪರಿಪಾಠವನ್ನು ರೂಢಿಸಿಕೊಳ್ಳುವುದು ಹಿತಕರ. ಹಿತವಾದ ಗಾಳಿಗೆ ಮೈಯೊಡ್ಡಿ ನಡೆಯುವುದರಿಂದ ದೇಹದಲ್ಲಿ ವ್ಯಾಯಾಯಮ , ರಕ್ತ ಸಂಚಲನೆ ಉಂಟಾಗುವುದು.

ಮಗುವಿಗೆ ಜನ್ಮ ನೀಡಿದ ನಂತರದ 900 ಮಹಿಳೆಯರನ್ನು ಒಂದು ವರ್ಷ ಕಾಲ ಅಧ್ಯಯನಕ್ಕೊಳಪಡಿಸಿದ ನಂತರ, ನಿರಂತರವಾಗಿ ವಾಕಿಂಗ್ ಮಾಡುವ ಅಭ್ಯಾಸವನ್ನಿಟ್ಟುಕೊಂಡಿರುವ ಹೆಚ್ಚಿನ ಮಹಿಳೆಯರು ಗರ್ಭಧಾರಣೆ ತೂಕವನ್ನು ಉಳಿಸಿಕೊಳ್ಳುವ ಸಾಧ್ಯತೆ ಕಡಿಮೆ. ಹಾಗೂ ಟಿವಿಯನ್ನು ಹೆಚ್ಚು ವೀಕ್ಷಿಸದ ಹಾಗೂ ಹೆಚ್ಚು ಕೊಬ್ಬಿನಂಶವುಳ್ಳ ಆಹಾರ, ಕರಿದ ಆಹಾರ, ಮಸಾಲೆ ಪದಾರ್ಥ ಸೇವಿಸದ ಮಹಿಳೆಯರಲ್ಲೂ ಕೂಡ ಈ ಅಂಶ ಸ್ಪಷ್ಟ ಎಂಬುದಾಗಿ ಸಂಶೋಧನಕಾರರು ತಿಳಿಸಿದ್ದಾರೆ.

ಬೋಸ್ಟನ್‌ನಲ್ಲಿನ ಹಾವರ್ಡ್ ವೈದ್ಯಕೀಯ ಶಾಲೆಯ ಡಾ.ಎಮಿಲಿ ಓಕೆನ್ ಮತ್ತು ಸಹಪಾಠಿಗಳ ಈ ಸಂಶೋಧನೆಯು ಮಹಿಳೆಯರು ಮಗುವಿಗೆ ಜನ್ಮ ನೀಡಿದ ನಂತರ ತಾವು ಅನುಸರಿಸಿದ ಪಥ್ಯ, ವ್ಯಾಯಾಮ ಹವ್ಯಾಸಗಳು ಮತ್ತು ಟಿವಿ ವೀಕ್ಷಣೆ ಕುರಿತಾದ ಮಹಿಳೆಯರ ವರದಿಯನ್ನೂ ಸಹ ಒಳಗೊಂಡಿದೆ.

ಓಕೆನ್ ತಂಡ ಸಾಮಾನ್ಯವಾಗಿ ಕಂಡುದುದೇನೆಂದರೆ, ದಿನಕ್ಕೆ ಅರ್ಧ ಗಂಟೆ ನಡೆಯುವವರು, 2 ಗಂಟೆಗಿಂತಲೂ ಕಡಿಮೆ ಟಿವಿ ನೋಡುವವರು ಮತ್ತು ಕೊಬ್ಬು ಪದಾರ್ಥ ಸೇವಿಸದವರು ಜನ್ಮ ಧಾರಣೆಯ ಒಂದು ವರ್ಷದ ನಂತರ ಗರ್ಭಧಾರಣೆ ತೂಕವನ್ನು ಹೊಂದುವ ಸಾಧ್ಯತೆ ತೀರಾ ಕಡಿಮೆ.

ವಾಕಿಂಗ್ ಬದಲಾಗಿ ಟಿವಿ ನೋಡಬಯಸುವ ಮಹಿಳೆಯರಿಗೆ ಹೋಲಿಸಿದಾಗ, ಅವರು ಶೇ.77ರಷ್ಟು 12 ಪೌಂಡ್ ಕಡಿಮೆ ತೂಕವನ್ನು ಹೊಂದಿರುವುದಾಗಿ ಅಧ್ಯಯನ ತಿಳಿಸಿದೆ.

ವೆಬ್ದುನಿಯಾವನ್ನು ಓದಿ