ಸಿಂಥೆಟಿಕ್ ಚರ್ಮ ನೈಜ ಚರ್ಮದಷ್ಟೆ ಉತ್ತಮ

ಸಿಂಥೆಟಿಕ್ ಕೃತಕ ಚರ್ಮವು ನೈಜ ಚರ್ಮದಂತೆ ಕಾರ್ಯ ನಿರ್ವಹಿಸುತ್ತದೆ ಎಂಬ ವಿಚಾರವನ್ನು ಜರ್ಮನಿಯ ವಿಜ್ಞಾನಿಗಳು ಕಂಡುಹುಡುಕಿದ್ದಾರೆ.

ಸುಟ್ಟಗಾಯದಿಂದ ಅಥವಾ ಇತರ ಚರ್ಮ ವಿಕಾರಗಳಿಂದ ಬಳಲುತ್ತಿರುವವರಿಗೆ ಇದೊಂದು ಶುಭ ಸಮಾಚಾರವೇ ಸರಿ. ಸ್ಕಿನ್ ಗ್ರಾಫ್ಟಿಂಗ್ ತುಂಬ ನೋವು ನೀಡುವ ಚಿಕಿತ್ಸೆ. ಆದರೆ ಇದೀಗ ಕೃತಕ ಚರ್ಮದ ಲಭ್ಯತೆಯು ವೈದ್ಯ ವಿಜ್ಞಾನಿಗಳಿಗೆ ಹೊಸಸಾಧ್ಯತೆಗಳನ್ನು ಮುಂದಿರಿಸಿದೆ. ಪರೀಕ್ಷೆಗಳಿಗಾಗಿ ಕರುಳಿನ ಟಿಶ್ಯೂವನ್ನು ಉತ್ಪಾದಿಸಲು ವಿಜ್ಞಾನಿಗಳು ಮುಂದಾಗಿದ್ದಾರೆ.

ಟಿಶ್ಯೂ ಕಲ್ಚರ್ ಕುರಿತು ಕಳೆದ ಹಲವು ವರ್ಷಗಳಿಂದ ಸಂಶೋಧನೆ ನಡೆಯುತ್ತಿದೆ. ಹಲವಾರು ಬಯೋಟೆಕ್ನಾಲಜಿ ಲ್ಯಾಬ್‌ಗಳಲ್ಲಿ ಇದೀಗಾಗಲೇ ಚರ್ಮದ ಅಭಿವೃದ್ಧಿ ಮಾಡಲಾಗಿದೆ.

ಆದರೆ ಸ್ಟುಟ್‌ಗಾರ್ಟ್‌ನ ಫ್ರೌನ್ ಹೋಫರ್ ಇನ್‌ಸ್ಟಿಟ್ಯೂಟ್ ಇಂಟರ್‌ಫೇಶಿಯಲ್ ಇಂಜಿನಿಯರಿಂಗ್ ಮತ್ತು ಬಯೋಟೆಕ್ನಾಲಜಿಯ ಸಂಶೋಧಕರು ಒಂದು ಹೆಜ್ಜೆ ಮುಂದಿಟ್ಟು ಸಂಪೂರ್ಣ ಟಿಶ್ಯೂ ಆವಿಷ್ಕಾರದ ಗುರಿ ಹೊಂದಿದ್ದಾರೆ.

ವಿಶೇಷ ಜೆಲ್ ಮ್ಯಾಟ್ರಿಕ್ಸ್ ಸಹಾಯದಿಂದ ಚರ್ಮದ ವಿವಿಧ ಪದರಗಳ 3-ಡಿ ಪುನರ್‌ರಚನೆ ಮಾಡಲಾಗುತ್ತದೆ. ಅಂತಿಮ ಹಂತವಾಗಿ ರವಾನೆಗಾಗಿ ಚರ್ಮವನ್ನು ಯಂತ್ರದ ಮೂಲಕ ಪ್ಯಾಕ್ ಮಾಡಲಾಗುತ್ತದೆ. ಇಲ್ಲವೇ ಇವುಗಳನ್ನು ನಂತರದ ಬಳಕೆಗಾಗಿ ಆಳ ಶೀತಲೀಕರಣದ ಮೂಲಕ ದಾಸ್ತಾನಿರಿಸಲಾಗುತ್ತದೆ.

ವೆಬ್ದುನಿಯಾವನ್ನು ಓದಿ