ತೂಕ ಇಳಿಸುವ ಮ್ಯಾಜಿಕ್: 6 ಸಂಬಾರ ಪದಾರ್ಥಗಳು

ಮಂಗಳವಾರ, 19 ಏಪ್ರಿಲ್ 2016 (13:51 IST)
ಅನೇಕ ಮಂದಿ ಇಂದು ತೂಕ ಇಳಿಸಿಕೊಳ್ಳಲು ಬೇಯಿಸಿದ, ಮೃದುವಾದ ಆಹಾರ ಸೇವಿಸುತ್ತಾರೆ. ಆದರೆ ಇಂತಹ ರುಚಿರಹಿತ ಆಯ್ಕೆಗಳಿಗೆ ಪ್ರಯತ್ನಿಸದೇ ಭಾರತದ ತಿನಿಸುಗಳಲ್ಲಿ ಬಳಸುವ ಸಂಬಾರ ಪದಾರ್ಥಗಳು ವಾಸ್ತವವಾಗಿ ಮಹತ್ತರವಾಗಿ ತೂಕ ಇಳಿಸುವುದಕ್ಕೆ ಉತ್ತೇಜನ ನೀಡುತ್ತದೆ.  ಆದ್ದರಿಂದ ನಿಮ್ಮ ಆಹಾರದಲ್ಲಿ ಇಂತಹ ಸಂಬಾರ ಪದಾರ್ಥಗಳು ತಪ್ಪಿಹೋಗದಂತೆ ನೋಡಿಕೊಳ್ಳಿ. ಇವು ನಿಮ್ಮ ತೂಕವನ್ನು ಪರಿಣಾಮಕಾರಿಯಾಗಿ ತಗ್ಗಿಸುತ್ತದೆ.

ದಾಲ್ಚಿನ್ನಿಗೆ ತೂಕ ಇಳಿಸುವ ಗುಣಗಳಿವೆ. ನಿಮ್ಮ ಆಹಾರದಲ್ಲಿ ಒಂದು ಚಮಚೆ ದಾಲ್ಚಿನ್ನಿ ಬೆರೆಸುವ ಮೂಲಕ ಹೊಟ್ಟೆಯ ಕೊಬ್ಬನ್ನು ಇಳಿಸಬಹುದು. ಕರಿಬೇವು ನಿಮ್ಮ ದೇಹದಲ್ಲಿ ಬೇಡವಾದ ಕೊಬ್ಬಿನ ನಿಕ್ಷೇಪಗಳನ್ನು ತೆಗೆದು ತೂಕ ಇಳಿಸಲು ನೆರವಾಗುತ್ತದೆ. ಗರಂ ಮಸಾಲಾ ಕೂಡ ತೂಕ ಇಳಿಸಲು ನೆರವಾಗುತ್ತದೆ. ಇದು ಲವಂಗ, ಜೀರಿಗೆ ಮುಂತಾದ ಸಂಬಾರ ಪದಾರ್ಥಗಳ ಮಿಶ್ರಣ. ಕೆಂಪು ಮೆಣಸಿನ ಪುಡಿಯಲ್ಲಿ ಕ್ಯಾಪ್‌ಸಿಕಿನ್ ಸಂಯುಕ್ತವಿದ್ದು ದೇಹದ ಜೀವರಾಸಾಯನಿಕ ಚಟುವಟಿಕೆ ಹೆಚ್ಚಿಸುತ್ತದೆ.

ಉತ್ಪತ್ತಿಯಾಗುವ ಉಷ್ಣ ಕೂಡ ಕೊಬ್ಬನ್ನು ಕರಗಿಸುತ್ತದೆ. ಅರಿಶಿನದಲ್ಲಿ ಕರ್ಸುಮಿನ್ ಎಂಬ ಸಂಯುಕ್ತವಿದ್ದು ಇನ್ಸುಲಿನ್ ತಗ್ಗಿಸುವ ಮೂಲಕ ಕೊಬ್ಬಿನ ಅಂಶ ಕರಗಿಸುತ್ತದೆ. ಜೀರಿಗೆ ಆಹಾರ ಜೀರ್ಣಿಸಲು ನೆರವಾಗುತ್ತದೆ ಮತ್ತು ಹೊಟ್ಟೆಯ ಕೊಬ್ಬನ್ನು ಕರಗಿಸುತ್ತದೆ.

ವೆಬ್ದುನಿಯಾವನ್ನು ಓದಿ