ಕೃತಕ ಸಿಹಿಕಾರಕಗಳನ್ನ ಬಳಸುವವರು ಜೋಕೆ.. ಪ್ರಾಣವೇ ಹೋದೀತು..!

ಸೋಮವಾರ, 17 ಜುಲೈ 2017 (15:41 IST)
ಸಕ್ಕರೆ ಬದಲಾಗಿ ಬಳಸುವ ಕೃತಕ ಸಿಹಿಕಾರಕ ಉತ್ಪನ್ನಗಳು ದೀರ್ಘಾವಧಿಯಲ್ಲಿ ಒಬೆಸಿಟಿ, ತೀವ್ರ ರಕ್ತದೊತ್ತಡ, ಹೃದಯ ಸಂಬಂಧಿ ಖಾಯಿಲೆಗಳನ್ನ ತಂದೊಡ್ಡುತ್ತದೆ ಎನ್ನುತ್ತಿದೆ ಸಂಶೋಧನೆ.

ಕೆನಡಾ ಮನಿಟೋಬಾ ವಿಶ್ವವಿದ್ಯಾಲಯದಲ್ಲಿ ನಡೆದ ಸಂಶೋಧನೆಯಲ್ಲಿ ಕೃತ ಸಿಹಿಕಾರಕಗಳಾದ ಆಸ್ಪರ್ಟೇಮ್, ಸುಕ್ರಲೋಸ್ ಮತ್ತು ಸ್ಟೆವಿಯಾಗಳು ಅಧಿಕ ರಕ್ತದೊತ್ತಡ, ಶುಗರ್, ಭಯಾನಕ ಹೃದಯ ಸಂಬಂಧಿ ಕಾಯಿಲೆಗೆ ದಾರಿ ಮಾಡಿಕೊಡುತ್ತವೆ ಎಂಬುದು ಬೆಳಕಿಗೆ ಬಂದಿದೆ.

ಸಾಮಾನ್ಯವಾಗಿ ಡಯಟ್ ಸೋಡಾ, ಯೋಗರ್ತ್, ಬೇಕಿಂಗ್ ಫುಡ್`ಗಳಲ್ಲಿ ಬಳಸಲಾಗುವ ಆಸ್ಪರ್ಟೇಮ್, ಸುಕ್ರಲೋಸ್ ಮತ್ತು ಸ್ಟೆವಿಯಾಗಳಂತಹ ರುಚಿಕಾರಗಳನ್ನ ಬಳಸಲಾಗುತ್ತೆ. ಇವುಗಳನ್ನ ಸೇವಿಸುವುದರಿಂದ ದೀರ್ಘಕಾಲದ ಒಬೆಸಿಟಿ ಉಂಟಾಗಿ ಹೃದಯ ಸಂಬಂಧಿ ಕಾಯಿಲೆಗೆ ದಾರಿಯಾಗುತ್ತದೆ ಎನ್ನುತ್ತಿದೆ ಸಂಶೋಧನೆ. 6 ತಿಂಗಳ ಕಾಲ 1003 ಮಂದಿಯನ್ನ ಸಮೀಕ್ಷೆಗೊಳಪಡಿಸಿ ಈ ವರದಿ ಸಿದ್ಧಪಡಿಸಲಾಗಿದೆ. ಸಂಶೊಧನೆಯಲ್ಲಿ ಕೃತಕ ಸಿಹಿಕಾರಕಗಳಿಂದ ತೂಕ ಿಳಿಕೆ ಬಗ್ಗೆ ಯಾವುದೇ ಉಲ್ಲೇಖ ಮಾಡಿಲ್ಲ.

ತೂಕ ಇಳಿಸಲು ಬಳಸುವ ಕೃತಕ ಸಿಹಿಕಾರಕಗಳು ಅಂದುಕೊಂಡಂತೆ ಪ್ರಯೋಜನಗಳನ್ನ ನೀಡುವುದಿಲ್ಲ. ಬದಲಾಗಿ, ಸಮಸ್ಯೆಗಳನ್ನ ತಂದೊಡ್ಡುತ್ತವೆ ಎಂದು ಸಹಾಯಕ ಅಧ್ಯಾಯಕ ರ್ಯಾನ್ ಜರಿಚಾನ್ಸ್`ಕಿ ಹೇಳಿದ್ದಾರೆ. ಕೆನಡಾದ ಸಿಎಂಎಜಿ ಜರ್ನಲ್`ನಲ್ಲಿ ಸಂಶೋಧನಾ ವರದಿ ಪ್ರಕಟವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ