ಪ್ರಶ್ನೆ: ನಾನು 28 ವರ್ಷದ ಯುವಕ. ವಯೋ ಸಹಜವಾಗಿ ನಾನೊಂದು ಹುಡುಗಿಯನ್ನು ಇಷ್ಟಪಟ್ಟಿದ್ದೇನೆ. ಅವಳು ತುಂಬಾ ಬೋಲ್ಡ್ ಆಗಿ ಆರಂಭದಲ್ಲಿ ಮಾತನಾಡೋಕೆ ಶುರುಮಾಡಿದ್ಲು. ನಾನು ಅವಳನ್ನು ಪ್ರೀತಿಸೋಕೆ ರೆಡಿಯಾದೆ. ಅವಳ ಬಗ್ಗೆ ನಾನಾ ಕಲ್ಪನೆ ಕಟ್ಟಿಕೊಂಡಿದ್ದೆ. ಆದರೆ ಕೆಲವು ದಿನಗಳ ಬಳಿಕ ಆಕೆ ನನ್ನ ಜತೆ ಸಲುಗೆಯಿಂದ ವರ್ತಿಸೋಕೆ ಆರಂಭ ಮಾಡಿದ್ದಾಳೆ.
ಆದರೆ ನನ್ನ ಸಮಸ್ಯೆ ಏನೆಂದರೆ ಆಕೆಗೆ ಪ್ರೀತಿ, ಪ್ರೇಮಕ್ಕಿಂತ ಮುಖ್ಯವಾದದ್ದು ಹಣ ಅಂತೆ. ನಿನಗೆ ಗೊತ್ತಿಲ್ಲ ಕಣೋ ಹಣಾನೇ ಎಲ್ಲದಕ್ಕೂ ಮೊದಲು. ಅದು ಎಷ್ಟಿದ್ದರೂ ಸಾಲದು ಅಂತಿದ್ದಾಳೆ. ಇದಿಷ್ಟೇ ಅಲ್ಲ, ಅವಳು ಹಣಕ್ಕಾಗಿ ಕಾಲ್ ಗರ್ಲ್ ಕೆಲಸ ಮಾಡುತ್ತಿದ್ದಾಳೆ. ಅವಳು ಯಾರನ್ನೂ ನಂಬೋದಿಲ್ವಂತೆ. ನನ್ನನ್ನೂ ಕೂಡಾ. ಹೀಗಿದ್ದರೂ ಅವಳನ್ನು ನಾನು ಪ್ರೀತಿ ಮಾಡಬಹುದಾ?
ಉತ್ತರ: ರಾತ್ರಿ ಕಂಡ ಬಾವಿಯಲ್ಲಿ ಹಗಲಲ್ಲಿ ಹೋಗಿ ಬೀಳಬೇಡಿ. ನೀವು ಪ್ರೀತಿಮಾಡುತ್ತಿರುವ ಹುಡುಗಿ ನಿಮ್ಮ ಕಲ್ಪನೆ ಮೀರಿ ಹೋಗಿದ್ದಾಳೆ. ಅವಳನ್ನು ಅವಳಷ್ಟಕ್ಕೆ ಬಿಟ್ಟು ಬಿಡಿ. ಅವಳ ಸ್ನೇಹ ಮಾಡಿ ನೀವು ಇಲ್ಲದ ರೋಗ ಹತ್ತಿಸಿಕೊಳ್ಳಬೇಡಿ.
ಬೇರೆ ಯಾರಾದರೂ ಉತ್ತಮ ನಡತೆಯುಳ್ಳ ಹುಡುಗಿಯನ್ನು ಪ್ರೀತಿಸಿ, ಮದುವೆಯಾಗಿ ಸುಖವಾಗಿರಿ. ಪ್ರೀತಿಗಿಂತ ನಿಮ್ಮ ಹುಡುಗಿಗೆ ದುಡ್ಡೇ ಮುಖ್ಯವಾಗಿದೆ. ಹೀಗಾಗಿ ಅವಳ ಲೆಕ್ಕದಲ್ಲಿ ನಿಮ್ಮ ಪ್ರೀತಿಗೆ ನೆಲೆ, ಬೆಲೆ ಯಾವತ್ತಿಗೂ ಸಿಗೋದಿಲ್ಲ.