ಸಿಗರೇಟ್, ಬಿಡಿ, ಸಿಗಾರ್ ಚುಟ್ಟಾ ಯಾವುದೇ ಆಗಿರಲಿ ಅದರ ಸೇವನೆಯಿಂದ ಅನಾರೋಗ್ಯ ಉಂಟಾಗುತ್ತದೆ ಎನ್ನುವ ಸಂಗತಿಯನ್ನು ಪದೇಪದೇ ವೈದ್ಯರು ಮಾತ್ರವಲ್ಲದೆ ಹಿತೈಷಿಗಳು ಹೇಳುತ್ತಿರುತ್ತಾರೆ . ಆದರೇ ಒಮ್ಮೆ ಶುರುವಾದ ಅಭ್ಯಾಸ ತುರಿಕೆಯಂತೆ ಬಿಡದೆ ಕಾಡುತ್ತದೆ ಕಂಗಾಲು ಮಾಡುತ್ತದೆ. ಹಾಗೆಂದು ಈ ದುರಭ್ಯಾಸ ಬಿಡಲಿಕ್ಕೆ ಸಾಧ್ಯವಿಲ್ಲ ಎಂದೇನೂ ಇಲ್ಲ, ನೀವು ಮನಸ್ಸು ಮಾಡಬೇಕಷ್ಟೆ ಎನ್ನುವ ಕಿವಿ ಮಾತು ಹೇಳುತ್ತಾರೆ ವೈದ್ಯರು.
ಇಷ್ಟೆಲ್ಲಾ ತೊಂದರೆ ಅನುಭವಿಸುವುದಕ್ಕಿಂತ ಬಿಡುವುದು ವಾಸಿ ಎಂದು ನೀವು ಧೂಮಪಾನ ಮಾಡುವುದನ್ನು ಬಿಟ್ಟರೆ, ಆ ನಂತರ ವಿಟಮಿನ್- ಇ ಮಾತ್ರೆಗಳನ್ನು ಒಂದಷ್ಟು ಪ್ರಮಾಣದಲ್ಲಿ ಸೇವಿಸಿ. ಇದರಿಂದ ನಿಮ್ಮ ಹೃದಯದ ಆರೋಗ್ಯಕ್ಕೆ ಹಾನಿಯಾಗದು ಎಂದಿದ್ದಾರೆ ತಜ್ಞರು. ಈ ಸಂಗತಿಯನ್ನು ಅಮೆರಿಕದಲ್ಲಿರುವ ಓಹಿಯೋ ಸ್ಟೇಟ್ ಯೂನಿವರ್ಸಿಟಿ ಸಂಶೋಧಕರು ತಿಳಿಸಿದ್ದಾರೆ.