ಕೇವಲ 5 ರೂಪಾಯಿಗಳಲ್ಲಿ ನಿಮ್ಮ ಕಿಡ್ನಿ ಕ್ಲೀನ್ ಮಾಡಿಕೊಳ್ಳಿ

ಶುಕ್ರವಾರ, 30 ಸೆಪ್ಟಂಬರ್ 2016 (15:25 IST)
ನಮ್ಮ ದೇಹದಲ್ಲಿರುವ ಕಿಡ್ನಿ ಹಲವು ವರ್ಷಗಳಿಂದ ದೇಹದಲ್ಲಿ ಜಮಾವಣೆಗೊಂಡಿರುವ ಉಪ್ಪಿನಾಂಶ ಮತ್ತು ಅನಗತ್ಯ ಬ್ಯಾಕ್ಟಿರಿಯಾಗಳನ್ನು ಹೊರಹಾಕುವ ಕಾರ್ಯ ಮಾಡುತ್ತದೆ.
ದೇಹದಲ್ಲಿರುವ ಉಪ್ಪಿನಾಂಶವನ್ನು ಹೊರಹಾಕುವ ಪ್ರಕ್ರಿಯೆಯಲ್ಲಿ ದಿನಗಳೆದಂತೆ ಅಲ್ಪ ಪ್ರಮಾಣದ ಉಪ್ಪಿನಾಂಶ ಕಿಡ್ನಿಯಲ್ಲಿ ಉಳಿದುಕೊಳ್ಳುತ್ತದೆ. ಕಿಡ್ನಿಯಲ್ಲಿ ಉಳಿದುಕೊಂಡಿರುವ ಉಪ್ಪಿನಾಂಶವನ್ನು ಹೊರಹಾಕುವುದು ಅಗತ್ಯವಾಗಿರುತ್ತದೆ. ಆದರೆ, ಹೇಗೆ ಹೊರಹಾಕ ಬೇಕು ಎನ್ನುವ ಪ್ರಶ್ನೆ ಉದ್ಭವಿಸುತ್ತದೆಯಲ್ವಾ?
 
ಇದೊಂದು ತುಂಬಾ ಸುಲಭ, ಸರಳ ಮತ್ತು ಅತಿ ಕಡಿಮೆ ವೆಚ್ಚದಾಗಿದೆ. 
 
ಕೊತ್ತಂಬರಿ ಸೊಪ್ಪು ತೆಗೆದುಕೊಂಡು ಅದನ್ನು ಶುಚಿಯಾಗಿರುವ ನೀರಿನಿಂದ ಸ್ವಚ್ಚಗೊಳಿಸಿ. ನಂತರ ಅದನ್ನು ಚಿಕ್ಕದಾಗಿ ಕತ್ತರಿಸಿ ಪಾತ್ರೆಯಲ್ಲಿಡಿ. ಪಾತ್ರೆಯೊಳಗೆ ನೀರು ಹಾಕಿ ಹತ್ತು ನಿಮಿಷಗಳ ಕಾಲ ಕಾಯಿಸಿ. ನಂತರ ಆರಲು ಬಿಡಿ. ತದನಂತರ ಅದನ್ನು ಚೆನ್ನಾಗಿ ಸೋಸಿ ಶುಚಿಯಾಗಿರುವ ಬಾಟಲ್‌ನಲ್ಲಿ ಹಾಕಿ ಫ್ರಿಡ್ಜ್‌ನಲ್ಲಿಡಿ.   
 
ಪ್ರತಿದಿನ ಒಂದು ಗ್ಲಾಸ್ ಕುಡಿಯಬೇಕು. ನೀವು ಮೂತ್ರ ಮಾಡುವಾಗ ನಿಮ್ಮ ಕಿಡ್ನಿಯಲ್ಲಿರುವ ಉಪ್ಪಿನಾಂಶ ಮತ್ತು ಇತರ ಅನಗತ್ಯ ಬ್ಯಾಕ್ಟಿರಿಯಾಗಳು ನಿಧಾನವಾಗಿ ಹೊರಹೋಗುವುದು ನಿಮ್ಮ ಗಮನಕ್ಕೆ ಬರುತ್ತದೆ.
 
ನೈಸರ್ಗಿಕವಾಗಿರುವ ಕೊತ್ತಂಬರಿ ಸೊಪ್ಪು ಕಿಡ್ನಿ ಚಿಕಿತ್ಸೆಗೆ ರಾಮಬಾಣವಾಗಿದೆ. ನೀವು ಕೂಡಾ ಬಳಸಿ ಆರೋಗ್ಯವಂತರಾಗಿ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ